Site icon ಉಡುಪಿ ನ್ಯೂಸ್ ಪ್ಲಸ್

ದಂಡತೀರ್ಥ: ಹಳೇ ವಿದ್ಯಾರ್ಥಿ ಸಂಘ ಉದ್ಘಾಟನೆ

ಕಾಪು ಉಳಿಯಾರಗೋಳಿಯ ದಂಡತೀರ್ಥ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದ ಹಳೇ ವಿದ್ಯಾರ್ಥಿ ಸಂಘವನ್ನು ಆಯೋಜನೆ ಮಾಡಲಾಯಿತು. ಆಂಗ್ಲ ಮಾಧ್ಯಮ ವಿಭಾಗದ ಪ್ರಥಮ ಸಾಲಿನ ವಿದ್ಯಾರ್ಥಿ, ಉದ್ಯಮಿ ನಯೇಶ್ ಶೆಟ್ಟಿ ಯವರು ಅಧ್ಯಕ್ಷರಾಗಿ ಆಯ್ಕೆಗೊಂಡರು. ಬಳಿಕ ಮಾತನಾಡಿ, ಯಾವುದೇ ವಿದ್ಯಾಸಂಸ್ಥೆಯ ಪ್ರಗತಿಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಪಾತ್ರವೂ ಇರುತ್ತದೆ. ದೇಶ ವಿದೇಶ ಹಾಗೂ ವ್ಯವಹಾರಗಳಲ್ಲಿ ತೊಡಗಿದ್ದ ನಮ್ಮನ್ನು ಒಟ್ಟುಗೂಡಿಸಲು ಕಾರಣರಾದ ಸಂಚಾಲಕರನ್ನು ಪ್ರಶಂಸಿಸಿದರು. ಮುಂದಿನ ದಿನಗಳಲ್ಲಿ ಸಂಸ್ಥೆಗೋಸ್ಕರ ತಂಡವಾಗಿ ಶ್ರಮಿಸಿ, ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತೇವೆ ಎಂಬ ಸಂದೇಶವನ್ನು ನೀಡಿದರು. ಸಮಾರಂಭದಲ್ಲಿ ಸಂಚಾಲಕರಾದ ಡಾll ಕೆ. ಪ್ರಶಾಂತ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ನೀಲಾನಂದ ನಾಯ್ಕ್ ಪ್ರಸ್ತಾವನೆಗೈದರು. ಶಿಕ್ಷಕರಾದ ಪ್ರಭಾಕರ್ ಶೆಟ್ಟಿ ಸ್ವಾಗತಿಸಿದರು, ಸೂರಥ್ ಶೆಟ್ಟಿ ವಂದಿಸಿದರೆ, ಶಿವಣ್ಣ ಬಾಯರ್ ನಿರೂಪಿಸಿದರು.
ನಯೇಶ್ ಶೆಟ್ಟಿ ಅಧ್ಯಕ್ಷರು, ಸಮರ್ಥ ಶೆಟ್ಟಿ ಕಾರ್ಯದರ್ಶಿ,ಕೃಷ್ಣಕಾಂತ್ ಜೋಗಿ ಖಜಾಂಚಿ, ಸಾಂಸ್ಕೃತಿಕ ಸಂಯೋಜಕ ವಿನೋದ್ ಶೆಟ್ಟಿ, ಕ್ರೀಡಾ ಸಂಯೋಜಕ ಫೈಜಲ್ ಖಾಝಿ, ಉಪಾಧ್ಯಕ್ಷರುಗಳಾಗಿ ಮಿಥಿನ್ ಶೆಟ್ಟಿ, ನಜ್ಮಾ, ಸುಹಾಸ್ ಶೆಟ್ಟಿ, ವರುಣ್ ಶೆಟ್ಟಿ, ದಿವ್ಯೇಶ್ ಕುಮಾರ್, ನಿತಿನ್ ಶೆಟ್ಟಿ, ಸದಸ್ಯರಾಗಿ ರಾಜಶೇಖರ್ ಜಿ.ಎಸ್., ದೇವೇಂದ್ರ ನಾಯ್ಕ್, ಉಲ್ಲೇಖ್ ಹೆಗ್ಡೆ, ನಿಧಿರಾಜ್ ಶೆಟ್ಟಿ, ಬಾಲಕೃಷ್ಣ ಮೆಂಡನ್, ಇವರನ್ನು ನೇಮಿಸಲಾಯಿತು.

Exit mobile version