Site icon ಉಡುಪಿ ನ್ಯೂಸ್ ಪ್ಲಸ್

ಜನಾರ್ದನ್ ಕೊಡವೂರು ಅವರಿಗೆ “ಮಹರ್ಷಿ ವಾಲ್ಮೀಕಿ ಸಮ್ಮಾನ್ 2025” ಪ್ರಶಸ್ತಿ

ಮಹರ್ಷಿ ವಾಲ್ಮೀಕಿ ಸಮ್ಮಾನ್ – 2025
ಕನ್ನಡದ ಮೊದಲ ಮಹಾಕಾವ್ಯ ರಾಮಾಯಣದ ಕರ್ತೃ, ಪೌರಾಣಿಕ ಕವಿ, ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಅಕ್ಟೋಬರ್ 07 ರಂದು ಆಚರಿಸುತ್ತೇವೆ. ಸರ್ಕಾರವೂ ಕೂಡಾ ಸಕಲ ಗೌರವಗಳೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತದೆ. ಮಹರ್ಷಿ ವಾಲ್ಮೀಕಿ ಅವರು ನಮ್ಮ ಹಿಂದೂ ಸಮಾಜಕ್ಕೆ ಭಕ್ತಿ ಭಾವನಾತ್ಮಕ ಗ್ರಂಥವಾದ ರಾಮಾಯಣವನ್ನು ನಮಗೆ ಕೊಟ್ಟವರು, ರತ್ನಾಕರನೆಂಬ ಒಬ್ಬ ಬೇಡ, ಕ್ರೂರ ವ್ಯಕ್ತಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತಿತಗೊಂಡ ಅಧ್ಬುತ ಕಥೆ ತಿಳಿದಿರು ವಂತದ್ದು, ಹಿಂದೂಗಳಾದ ನಾವೆಲ್ಲ ಮಹರ್ಷಿ ವಾಲ್ಮೀಕಿ ಅವರನ್ನು ಭಕ್ತಿಯಿಂದ ಪೂಜಿಸಬೇಕು, ಆರಾಧಿಸಬೇಕು.

ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಕಳೆದ ಎರಡು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ನಮ್ಮ ಸಂಘದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಿ ಆಚರಿಸುತ್ತಿದ್ದೇವೆ. ಕಾರ್ಯಕ್ರಮದ ಉದ್ಘಾಟಕರಾಗಿ ಮಾನ್ಯ ಶಾಸಕರಾದ ಯಶ್ ಪಾಲ್ ಸುವರ್ಣ ಅವರು ಆಗಮಿಸಲಿದ್ದು, ಕನ್ನಡ ನಾಡು – ನುಡಿ ಸಂಸ್ಕೃತಿ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜನಾರ್ದನ್ ಕೊಡವೂರು ಅವರಿಗೆ ಮಹರ್ಷಿ ವಾಲ್ಮೀಕಿ ಸಮ್ಮಾನ್ – 2025 ನ್ನು ನೀಡಿ ಗೌರವಿಸಲಿದ್ದೇವೆ.

ಸಂಘಟಕ ಜಯಕರ ಶೆಟ್ಟಿ ಇಂದ್ರಾಳಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ವಹಿಸಲಿದ್ದು, ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ಅವರು ಮಹರ್ಷಿ ವಾಲ್ಮೀಕಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ . ಅಭಿನಂದನಾ ಮಾತುಗಳನ್ನಾಡಲಿದ್ದಾರೆ ಖ್ಯಾತ ಛಾಯಾಗ್ರಾಹಕ ರಾದ ಆಸ್ಟ್ರೋ ಮೋಹನ್ ರವರು.

Exit mobile version