ಉಚ್ಚಿಲ ಸೆ. 22: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೋಮವಾರ ಆರಂಭಗೊಂಡ ‘ಉಡುಪಿ ಉಚ್ಚಿಲ ದಸರಾ’ದಲ್ಲಿ ಈ ವರ್ಷದ ಸೂಪರ್ ಹಿಟ್, ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದ ‘ಸು ಪ್ರಮ್ ಸೋ’ ಚಿತ್ರ ತಂಡದ ಕಲಾವಿದರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ನಾಡೋಜ ಜಿ.ಶಂಕರ್ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಸುವರ್ಣ ಬೆಳ್ಳಂಪಳ್ಳಿ ನೇತೃತ್ವದಲ್ಲಿ ನಡೆಯುತ್ತಿರುವ ‘ಉಡುಪಿ ಉಚ್ಚಿಲ ದಸರಾ’ ಮಹೋತ್ಸವದಲ್ಲಿ ಚಿತ್ರ ತಂಡದ ನಿರ್ದೇಶಕ, ನಾಯಕ ನಟ ಜೆಪಿ ತುಮ್ಮಿನಾಡು ಸೇರಿದಂತೆ ಚಿತ್ರ ತಂಡದ ಕಲಾವಿದರನ್ನು ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ಸನ್ಮಾನಿಸಲಾಯಿ
‘ಸು ಪ್ರಮ್ ಸೋ’ ಚಿತ್ರ ತಂಡದ ಕಲಾವಿದರಾದ ಪುಷ್ಪರಾಜ್ ಬೋಳಾರ್, ವಿಶ್ವನಾಥ್ ಅಸೈಗೋಳಿ, ಪೂರ್ಣಿಮಾ ಸುರೇಶ, ಶಶಿರಾಜ್ ಉಚ್ಚಿಲ, ಯತೀಶ್ ಬೈಕಂಪಾಡಿ, ತಾಂತ್ರಿಕ ವರ್ಗದ ಪ್ರವೀಣ್ ಶ್ರೀಯಾನ್, ಪ್ರತೀಕ್ ಅತ್ತಾವರ್, ಅರ್ಪಿತಾ ಅಡ್ಯಾರ್, ವಿಜಯ ಕುಮಾರ್ ಶೆಟ್ಟಿ, ಶಮೀಲ್ ಬಂಗೇರ, ಲತೀಶ್ ದೇವಾಡಿಗ, ದೀಕ್ಷಿತ್ ಕುಲಾಲ್, ರೋಹಿತ್ ಶೆಟ್ಟಿ, ಶ್ರವಣ್ ಸುರತ್ಕಲ್ ಅವರಿಗೆ ಡಾ.ಜಿ.ಶಂಕರ್ ಸ್ಮರಣಿಕೆ, ಶಾಲು ಹೊದಿಸಿ ಅಭಿನಂದಿಸಿದ್ದಾರೆ.
ಈ ವೇಳೆ ‘ಬಂದರೋ ಬಂದರೋ ಬಾವ w’….क ಹಾಸ್ಯ ನಟ ಪುಷ್ಪರಾಜ್ ಬೋಳಾರ್ ಸ್ಟೆಪ್ ಹಾಕಿದರು. ಈ ವೇಳೆ ಸೇರಿದ ಜನ ಸಿಳ್ಳೆ, ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಸುವರ್ಣ ಬೆಳ್ಳಂಪಳ್ಳಿ, ಶಾಲಿನಿ ಜಿ.ಶಂಕರ್, ಉಷಾರಾಣಿ, ಸುಗುಣ ಅವರು ಈ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಅವರು ಕಾರ್ಯಕ್ರಮವನ್ನು ನಿರೂಪಿದರು.

