ಉಡುಪಿ ನ್ಯೂಸ್ ಪ್ಲಸ್

ಉಡುಪಿ : ಸಿವಿಲ್ ಎಂಜಿನಿಯರ್ಸ್ ಡೇ ದಿನಾಚರಣೆ ಸಾಧಕರಿಗೆ ಸನ್ಮಾನ

ಉಡುಪಿ, ಸೆ. 17: ಉಡುಪಿ ಸಿವಿಲ್ ಎಂಜಿನಿಯರ್ಸ್ ಎಸೋಸಿಯೇಷನ್ (ಯುಸಿಇಎ) ವತಿಯಿಂದ ಕಿದಿಯೂರು ಹೊಟೇಲಿನ ಅನಂತಶಯನ ಹಾಲ್ ನಲ್ಲಿ ಬುಧವಾರ ಎಂಜಿನಿಯರ್ಸ್ ಡೇ ಆಚರಣೆ ನಡೆಯಿತು. ಮಂಗಳೂರು ಅಸೋಸಿಯೇಶನ್ ಆಫ್ ವ್ಯಾಲ್ಯುವರ್ಸ್‌ನ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ,ನಿಷ್ಠೆ, ಸಮಗ್ರತೆಯಿಂದ ಕೆಲಸ ಮಾಡಿದಾಗ ಪ್ರತಿಫಲ ದೊರೆಯುವುದರಲ್ಲಿ ಸಂಶಯ ವಿಲ್ಲ ಎಲ್ಲರೊಂದಿಗೂ ಪ್ರೀತಿಯಿಂದ ಇದ್ದು ಸಿಕ್ಕಿದ್ದನ್ನು ದಕ್ಕಿಸಿಕೊಂಡು, ಇದ್ದುದರಲ್ಲಿ ಸಂತೃಪ್ತಿ ಪಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಕೆ. ರಂಜನ್ ಮಾತನಾಡಿ, ಗುರುವಿನ ವಿದ್ದರೆ ಎಷ್ಟು ಬೇಕಾದರೂ ಎತ್ತರಕ್ಕೆ ಬೆಳೆಯಬಹುದು. ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರನ್ನು ಗುರುತಿಸಿ ಸಮ್ಮಾನಿಸುವ ಮತ್ತು ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದರು.

ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು. ಕಿರಣ್ ಕಾಮತ್, ಸತೀಶ್ ರಾವ್ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗೈದಸದಸ್ಯರಮಕ್ಕಳಾದ ಅತ್ ಬೀಡು, ಶ್ರೇಯಸ್ ಬೇಕಲ್, ಸೀಜಲ್ ಅವರನ್ನು ಅಭಿನಂದಿಸಲಾಯಿತು. ಎಂಜಿನಿಯರ್‌ಗಳಾದ ಭರತ್ ಭೂಷಣ್, ಗಣೇಶ್ ಸಾಲ್ಯಾನ್ ಪರಿಚಯಿಸಿದರು. ಸ್ವಾತಿ ಆಚಾರ್ಯ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಕೆ. ಹರೀಶ್ ಕುಮಾರ್ ವಂದಿಸಿದರು.

Exit mobile version