Site icon ಉಡುಪಿ ನ್ಯೂಸ್ ಪ್ಲಸ್

ಕನ್ನರ್ಪಾಡಿ ಕಿನ್ನಿಮೂಲ್ಕಿ ಸಾರ್ವಜನಿಕ ಶ್ರೀ ಗಣೇಶೋತ್ಸಕಾರ್ಯಕ್ರಮ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಭೇಟಿ

ಕನ್ನರ್ಪಾಡಿ ಕಿನ್ನಿಮೂಲ್ಕಿ ಸಾರ್ವಜನಿಕ ಶ್ರೀ ಗಣೇಶೋ ತ್ಸವಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಶನಿವಾರ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು. ಅನಂತರ ಅವರು ಮಾತನಾಡಿ ಕೃಷ್ಣಮೂರ್ತಿ ಆಚಾರ್ಯ ಉತ್ತಮ ಸಂಘಟಕ ಯಾವುದೇ ಅಧಿಕಾರ ಇಲ್ಲದಿದ್ದರೂ ಈ ಕೆಲಸ ಮಾಡುತ್ತಾರೆ ಕೃಷ್ಣಮೂರ್ತಿ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಮೂರ್ತಿ ಆಚಾರ್ಯರ ನೇತೃತ್ವದಲ್ಲಿ 20 ವರ್ಷದಲ್ಲಿ ಗಣೇಶೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿರುವುದು ಈ ಭಾಗದ ಜನರಲ್ಲಿ ಧಾರ್ಮಿಕ ಭಾವನೆಯನ್ನು ಉದ್ದೀಪನಗೊಳಿಸುವ ಕಾರ್ಯ ಮಾಡುತ್ತಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಅವರ ಯೋಜನೆ-ಯೋಚನೆಗಳಿಂದ ಜನತೆಗೆ ಒಳಿತಾಗುತ್ತಿರುವುದು ಶ್ಲಾಘನೀಯ ಎಂದರು ಈ ಸಂದರ್ಭದಲ್ಲಿ ವಿನಯ್ ಕುಮಾರ್ ಸೊರಕೆ ಪ್ರಸಾದ್ ಕಾಂಚನ್ ಜಯಪ್ರಕಾಶ್ ಹೆಗ್ಡೆ ಅಶೋಕ್ ಕುಮಾರ್ ಕೊಡವುರ್ ಮಿಥುನ್ ರೈ ರಮೇಶ್ ಕಾಂಚನ್ ಗಫೂರ್ ಉದಯ ಕುಮಾರ್ ಶೆಟ್ಟಿ ರಮೇಶ್ ಕಾಂಚನ್, ಸದಾಶಿವ ಅಮೀನ್ ಕಟ್ಟೆಗುಡ್ಡೆ ಜಯಕರ ಶೇರಿಗಾರ್, ಸಂಜೀವ ಎ, ವಿಜಯ ಪೂಜಾರಿ ಬೈಲೂರು, ನವೀನ್ ಶೆಟ್ಟಿ ಅಮೃತಾ ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು

Exit mobile version