ಉಡುಪಿ ನ್ಯೂಸ್ ಪ್ಲಸ್

ಕಾಪು : ವಿವಿಧ ಶಾಲೆಗಳಲ್ಲಿ ಜೆ. ಐ. ಹೆಚ್. ವತಿಯಿಂದ ಶಿಕ್ಷಕರ ದಿನಾಚರಣೆ.

ಕಾಪು : ಶಿಕ್ಷಕರು, ಸಮಾಜದಲ್ಲಿ ಶಾಂತಿ , ಸೌಹಾರ್ದತೆ, ಪ್ರೀತಿ, ವಿಶ್ವಾಸವನ್ನು ಕಾಪಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಾರೆ. ಪೋಷಕರು ತಮ್ಮ ಮಕ್ಕಳನ್ನು ಪೂರ್ಣ ಭರವಸೆಯೊಂದಿಗೆ ಶಿಕ್ಷಕರ ಸುಪುರ್ದಿಗೆ ನೀಡಿ ನಿಷ್ಚಿಂತರಾದರೆ, ಶಿಕ್ಷಕರು ತಮ್ಮ ಸಂಪೂರ್ಣ ಶ್ರಮ ಹಾಗೂ ಅನುಭವವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದು ಅವರನ್ನು ಪ್ರೋತ್ಸಾಹಿಸಿ ಅವರಲ್ಲಿ ಇರುವ ಪ್ರತಿಭೆಯನ್ನು ಹೊರ ತೆಗೆದು ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿ ತಂದು ನಿಲ್ಲಿಸಿ ಸಂತಸ ಪಡುತ್ತಾರೆ. ಇಂದಿನ ಈ ಸಂಧಿಗ್ದ ಸ್ಥಿತಿಯಲ್ಲಿ ಶಿಕ್ಷಕರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ. ಎಂದು ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ಮಹಿಳಾ ವಿಭಾಗದ ಸಂಚಾಲಕಿ ಶೇಹೆನಾಜ್ ಕಾಪು ಭೇಟಿಯ ಸಂದರ್ಭದಲ್ಲಿ ಹೇಳಿದರು.ಅವರು ಇಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ಶುಭಾಶಯ ಸಲ್ಲಿಸಲು ಕಾಪು ತಾಲೂಕಿನ ಮಲ್ಲಾರ್ ಉರ್ದು ಪ್ರಾಥಮಿಕ ಶಾಲೆ , ಮಲ್ಲಾರ್ ಉರ್ದು ಸಂಯುಕ್ತ ಪ್ರೌಢ ಶಾಲೆ , ಮೌಲಾನಾ ಅಜಾದ್ ಇಂಗ್ಲಿಷ್ ಮಾಧ್ಯಮ ಶಾಲೆ , ಕ್ರೆಸೆಂಟ್ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಅಂಗನವಾಡಿಗಳಿಗೆ ಭೇಟಿ ನೀಡಿ ಸಿಹಿ ತಿಂಡಿ ಹಾಗೂ ಮಹಿಳಾ ಮಾಸಿಕ ಅನುಪಮವನ್ನು ವಿತರಿಸಿ ಬಂದರು.ತಂಡದಲ್ಲಿ ಫಝಿಲತ್ ಬಾನು , ರಹಮತುನ್ನಿಸ , ಆಯಿಷಾ ಶೈಮಾ, ಮುಹಮ್ಮದ್ ಹಾಶಿಮ್ ಸಾಹೇಬ್  ಅನೀಸ್ ಅಲಿ ಉಪಸ್ಥಿತರಿದ್ದರು 

Exit mobile version