Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ: ಆ.30-ಸಿಎಸ್‌ಐ ಮಿಷನ್ ಆಸ್ಪತ್ರೆ ನೂತನ ಬ್ರೆಸ್ಟ್ ಕ್ಯಾನ್ಸರ್ ಸ್ಕ್ರೀಮಿಂಗ್ ಯುನಿಟ್ ಶುಭಾರಂಭ

ಉಡುಪಿ ಉಡುಪಿಯ ಪ್ರಸಿದ್ದ ಸಿಎಸ್‌ಐ ಲೊಂಬಾರ್ಡ್ ಮೆಮೊರಿಯಲ್ ಮಿಷನ್ ಹಾಸ್ಪಿಟಲ್ ಇಲ್ಲಿ ನೂತನವಾಗಿ ಬ್ರೆಸ್ಟ್ ಕ್ಯಾನ್ಸರ್ ಸ್ಟ್ರೀಮಿಂಗ್ ಯೂನಿಟ್ ಅ. 30 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ನೂತನ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿ ಎಸ್ ಐ ಕೆ ಎಸ್ ಡಿ ಇದರ ಕೋಶಾಧಿಕಾರಿ ರೆವೆರೆಂಡ್ ಐವನ್ ಡಿ ಸನ್ಸ್, ಮಹಿಳಾ ಫಿಲೋಷಿಪ್‌ನ ಅಧ್ಯಕ್ಷೆ ಭಾರತಿ ಹೇಮಚಂದ್ರ, ತೆರಪಿಸ್ಟ್ ತನುಜಾಮ ಮಾಬೆನ್, ಪಿಎಸ್‌ಐ ಎಲ್‌ಎಂ ಎಚ್ ಇದರ ಡೆಪ್ಯೂಟಿ ಡೈರೆಕ್ಟರ್ ದೀಪ ವೈ.ರಾವ್ ಅವರು ಭಾಗವಹಿಸಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಸುಶೀಲ್ ಜತ್ತನ್ನ ತಿಳಿಸಿದ್ದಾರೆ.

Exit mobile version