ಕರ್ನಾಟಕ ರಾಜ್ಯ ಸರ್ಕಾರ ಬಡವರ ಮತ್ತು ಮಧ್ಯಮ ವರ್ಗಗಳ ಕಲ್ಯಾಣಕ್ಕಾಗಿ ವಿಶೇಷವಾಗಿ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿ ಹಾಕಿಕೊಂಡ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ 2025 ನೇ ಸಾಲಿನ ನೋಂದಾವಣಿ ಪ್ರಕ್ರಿಯೆಯ ಆರಂಭದ ಬಗ್ಗೆ ಪೋಸ್ಟರ್ ಬಿಡುಗಡೆಯು ಕಾಪು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿಯಲ್ಲಿ, ಕಾಪು ತಹಶೀಲ್ದಾರರ ಕಚೇರಿಯಲ್ಲಿ, ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಈ ಸಂಧರ್ಭ ಕಾಪು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ನವೀನ್ಚಂದ್ರ ಸುವರ್ಣ, ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಕಾಪು ತಹಶೀಲ್ದಾರ್ ಡಾ.ಪ್ರತಿಭಾ.ಆರ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲಾರದ ಡಾ.ಗೋಪಾಲಕೃಷ್ಣ ಗಾವಂಕರ್, ಉದ್ಯೋಗ ವಿನಿಮಯ ಕೇಂದ್ರದ ಸಿಬ್ಬಂದಿಗಳಾದ ಲತಾ, ಗೀತಾ, ಹಾಗೂ ಕಾಪು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಪ್ರಭಾಕರ ಆಚಾರ್ಯ, ಸುದೀರ್ ಎಸ್ ಕರ್ಕೇರ, ರೀನಾ ವಿನುತ ಡಿಸೋಜಾ , ಕೀರ್ತಿ ಕುಮಾರ್, ಕವೀತ , ರಾಜೇಶ್ ಕುಲಾಲ್, ಹಾಸನ್ ಬಾವಾ , ಉಪಸ್ಥಿತರಿದ್ದರು.
ಕಾಪು: ಯುವನಿಧಿ ಯೋಜನೆಯ 2025 ನೇ ಸಾಲಿನ ನೊಂದಾವಣಿ ಪ್ರಕ್ರಿಯೆಯ ಪೋಸ್ಟರ್ ಬಿಡುಗಡೆ

