Site icon ಉಡುಪಿ ನ್ಯೂಸ್ ಪ್ಲಸ್

ಕಾಪು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರಿಗೆ ಮನವಿ.

ಕಾಪು ವಿಧಾನಸಭಾ ಕ್ಷೇತ್ರದ ಕಾಪು ಬ್ಲಾಕ್ ಉತ್ತರ ಯುವ ಕಾಂಗ್ರೆಸ್ ಸಮಿತಿ ಇವರು ಕರ್ನಾಟಕ ಸರಕಾರದ ಮಾನ್ಯ ಮುಜರಾಯಿ ಹಾಗೂ ಸಾರಿಗೆ ಸಚಿವರಾದ ಸನ್ಮಾನ್ಯ ರಾಮಲಿಂಗ ರೆಡ್ಡಿಯವರು ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ನ ಅಧ್ಯಕ್ಷರಾದ ಮೊಹಮ್ಮದ್ ನಿಯಾಜ್ ಹಾಗೂ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಉತ್ತರದ ಅಧ್ಯಕ್ಷರಾದ ಶರತ್ ನಾಯ್ಕ್ ಇವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಸದಸ್ಯರು ಉಡುಪಿ ಮಣಿಪಾಲ ಹಿರಿಯಡ್ಕ ಮಾಣೈ ಬೆಳ್ಳಾರ್ಪಾಡಿ, ಹರಿಖಂಡಿಗೆ ಅಜೆಕಾರು ವರೆಗೆ ಹೋಗಲು ಸರಕಾರಿ ಬಸ್ಸಿನ ಸೌಲಭ್ಯ ಒದಗಿಸಿಕೊಡಲು ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಯುವಕಾಂಗ್ರೆಸ್ ಉಪಾಧ್ಯಕ್ಷರಾದ ಕಾರ್ತಿಕ್ ಕುಮಾರ್,ಆದರ್ಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾದ ವಿನೋದ್ ಶೇಟ್,ಸುನಿಲ್ ಶೆಟ್ಟಿ, ಸೂರಜ್ ಪೂಜಾರಿ, ವಿಶ್ವನಾಥ್ ನಾಯ್ಕ್, ಧನುಷ್ ಪೂಜಾರಿ, ವಿಘ್ನೇಶ್ ಶೇಟ್ ಕಾಪು ವಿಧಾನಸಭಾಕ್ಷೇತ್ರ ದ ಯುವಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಾದ ಪ್ರದೀಪ್ ನಾಯ್ಕ್, ಕಾಪು ಬ್ಲಾಕ್ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ನಿತಿನ್ ಶೆಟ್ಟಿ, ಉಪಸ್ಥಿತರಿದ್ದರು.

Exit mobile version