ಉಡುಪಿ: ಕಾರುಗಳಿಗೆ ವಾಶಿಂಗ್, ಕ್ಲೀನಿಂಗ್, ಸೆರಾಮಿಕ್, ಗ್ರ್ಯಾಫೀನ್ ಕೋಟಿಂಗ್ ಮತ್ತು ಪಿಪಿಎಫ್ ಸೇರಿದಂತೆ ಇನ್ನೂ ಹತ್ತು ಹಲವಾರು ಸೇವೆಗಳನ್ನು ನೀಡುವ ಮೂಲಕ ಕಾರ್ ಗಳಿಗೆ ವಿಶೇಷ ಕೇರ್ ನೀಡುವ ನಿಶ್ಚಿತ್ ಮತ್ತು ರಂಜಿತ್ ಮಾಲಕತ್ವದ ಅಮಿಗೋಸ್ (AMIGO’S) car in care ಸಂಸ್ಥೆ ಯನ್ನುಶಾಸಕ ಯಶ್ಪಾಲ್ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಉಡುಪಿಯಲ್ಲಿ ಇಂತಹ ಉದ್ಯಮದ ಅಗತ್ಯವಿದ್ದು .. ಯುವಕರ ಈ ಪ್ರಯತ್ನ ಶ್ಲಾಘನೀಯ ಎಂದರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಉದಯ್ ಕುಮಾರ್ ಶೆಟ್ಟಿಯವರು ಮಾತನಾಡಿ ಯುವಕರ ಈ ಹುಮ್ಮಸ್ಸಿನ ಪ್ರಯತ್ನಕ್ಕೆ ನಾವೆಲ್ಲರೂ ಜೊತೆಯಾಗಿ ನಿಲ್ಲಬೇಕು ಎಂಬ ಭರವಸೆಯ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಮಟ್ಟಿ ಮಾರ್ಬಲ್ಸ್ ನ ಮಾಲಕರಾದ ಮಹೇಶ್ ಮಟ್ಟಿ, ಆಲೈ ಎಂಟರ್ ಪ್ರೈಸಸ್ ಚೆನೈ ಇದರ ಪ್ರೊಪರೈಟರ್ ಶ್ರೀವೈದ್ಯ, ರಮೇಶ್ ಕಾಂಚನ್ ವಿಶ್ವನಾಥ ಪೂಜಾರಿ ಮೂಳೂರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು
