ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಪಾಠೇತರ ಚಟುವಟಿಕೆಗಳ ಉದ್ಘಾಟನೆಯನ್ನು ಸ್ಕೌಟ್ ರಾಷ್ಟ್ರಪತಿ ಪುರಸ್ಕಾರ ಪಡೆದ ನಮ್ಮವಿದ್ಯಾಸಂಸ್ಥೆಯ ಹಳೆವಿದ್ಯಾರ್ಥಿ, ಕಾಪು ಲಯನ್ಸ್ ಕ್ಲಬ್ ನ ಅಧ್ಯಕ್ಷ ಹಾಗೂ ಕಟಪಾಡಿ ಲಕ್ಷ್ಮೀ ಶ್ಯಾಮ್ ಡೆವಲಪರ್ಸ್ ನ ನಿರ್ದೇಶಕ ಲಯನ್ ವರುಣ್ ಶೆಟ್ಟಿ ನೆರವೇರಿಸಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮುಂದಿನ ದಿನಗಳಲ್ಲಿ ಶಿಸ್ತಿನ ಹಾಗೂ ಯಶಸ್ಸಿನ ವ್ಯಕ್ತಿಯಾಗಿ ಮೂಡಿಬರಲು ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಕೂಡಾ ನಾಯಕತ್ವ ಗುಣಗಳನ್ನು ಬೆಳೆಸಿ ರಾಷ್ಟ್ರಪ್ರೇಮಿ ವ್ಯಕ್ತಿಗಳಾಗಿ ಮೂಡಿಬನ್ನಿ ಎಂಬ ಸಂದೇಶ ನೀಡಿದರು. ಸಂಚಾಲಕರಾದ ಡಾ|| ಕೆ. ಪ್ರಶಾಂತ್ ಶೆಟ್ಟಿಯವರು ಸಭಾಧ್ಯಕ್ಷತೆಯನ್ನು ವಹಿಸಿ, ಮುಖ್ಯ ಅತಿಥಿಯನ್ನು ಸನ್ಮಾನಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಸಮಾರಂಭದಲ್ಲಿ ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್, ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್,ಇವರು ಪರಿಚಯ ಪತ್ರ ವಾಚಿಸಿದರು ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಜಲಕ್ಷ್ಮೀ ರಾವ್, ಬುಲ್ ಬುಲ್ ಶಿಕ್ಷಕಿ ಅನುಪಮಾ ಹಾಗೂ ವಿವಿಧ ಯುನಿಟ್ ಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ದೃತಿ ಸ್ವಾಗತಿಸಿ, ಅಭಿಷೇಕ್ ಸಿಂಗ್ ಧನ್ಯವಾದ ನೀಡಿದರು ಹಾಗೂ ಆರ್ಯನ್ ಮತ್ತು ಸಾದಿಯಾ ನಿರೂಪಿಸಿದರು.
ದಂಡತೀರ್ಥ: ಪಾಠೇತರ ಚಟುವಟಿಕೆಗಳ ಉದ್ಘಾಟನೆ

