ಉಡುಪಿ ನ್ಯೂಸ್ ಪ್ಲಸ್

ದಂಡತೀರ್ಥ: ಯೋಗ ದಿನಾಚರಣೆ

ವಿಶ್ವ ಯೋಗ ದಿನಾಚರಣೆಯನ್ನು ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಆಚರಿಸಲಾಯಿತು. ಯೋಗ ಗುರುವಾಗಿ ಭಾಗವಹಿಸಿದ ಪಡುಬಿದ್ರಿ ಜೇಸಿಯ ಪೂರ್ವಾಧ್ಯಕ್ಷ ಮಕರಂದ ಇವರು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ನೀಡಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ವಿದ್ಯಾರ್ಥಿಯ ದೈಹಿಕ ಹಾಗೂ ಮಾನಸಿಕ ಬೆಳಣಿಗೆಗೆ ಯೋಗ ಸಹಕಾರಿಯಾಗಿದ್ದು, ಪ್ರತಿನಿತ್ಯ ಉಲ್ಲಸಿತರಾಗಿ ಪಾಠ – ಪಾಠೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗುತ್ತದೆ ಎಂಬ ಸಂದೇಶವನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆ ಯನ್ನು ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ವಹಿಸಿ ಜಗತ್ತಿಗೆ ಯೋಗವನ್ನು ಪರಿಚಯಿಸಿದ ಭಾರತದ ಬಗ್ಗೆ ಹೆಮ್ಮೆಯನ್ನು ವ್ಯಕ್ತ ಪಡಿಸಿ, ಆರೋಗ್ಯದ ರಕ್ಷಣೆಗೆ ಯೋಗ ಸಹಕಾರಿ ಎಂಬ ಸಂದೇಶ ನೀಡಿದರು. ಪ್ರಾಂಶುಪಾಲ ನೀಲಾನಂದ ನಾಯ್ಕ್, ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್, ಸ್ಕೌಟ್, ಗೈಡ್, ಕಬ್, ಬುಲ್ ಬುಲ್, ಎನ್. ಸಿ. ಸಿ., ಸೇವಾದಳ, ಎನ್. ಎಸ್. ಎಸ್. ವಿಭಾಗದ ಶಿಕ್ಷಕ ಮುಖ್ಯಸ್ಥರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ತೇಜಶ್ರೀ ಸ್ವಾಗತಿಸಿದರು. ಶಿಕ್ಷಕಿ ಹೇಮಲತಾ ಧನ್ಯವಾದ ನೀಡಿದ ಈ ಕಾರ್ಯಕ್ರಮವನ್ನು ಶಿಕ್ಷಕ ಉದಯ ಕುಮಾರ್ ನಿರೂಪಿಸಿದರು.

Exit mobile version