Site icon ಉಡುಪಿ ನ್ಯೂಸ್ ಪ್ಲಸ್

ಪಡುಬಿದ್ರಿ ಜೂ. 22-29:  ಸಹಕಾರಿ ವ್ಯವಸಾಯಿಕ ಸೊಸೈಟಿ ಸಂಯೋಜನೆಯಲ್ಲಿ ಸಹಕಾರ ಸಪ್ತ ಸಂಭ್ರಮ  

ಸಹಕಾರ ಸಂಘಗಳ ನಿಬಂಧಕರ ಸೂಚನೆ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆದೇಶದನ್ವಯ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದೊಂದಿಗೆ ಜೂನ್ 22-29ರ ವರೆಗೆ ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವ  ಪಡೆದು ಸಹಕಾರ ಸಪ್ರ ಭ್ರಮ-2025ನ್ನು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸುವುದೆಂದು ನಿರ್ಣಯಿಸಲಾಗಿದೆ ಎಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್ ಹೇಳಿದ್ದಾರೆ. ಅವರು ಪಡುಬಿದ್ರಿ ಮುಖ್ಯ ಕಛೇರಿಯ ಸಭಾಂಗಣದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜೂ. 22 ಭಾನುವಾರ ಪರಿಸರ ಸ್ವಚ್ಚತಾ ಕಾರ್ಯಕ್ರಮದ ಮೂಲಕ ಅಂತರಷ್ಟ್ರೀಯ ಸಹಕಾರಿ ವರ್ಷಾಚರಣೆ-2025 ರ ಕಾರ್ಯಕ್ರಮಗಳ ಚಾಲನೆಗೊಳ್ಳಲಿದ್ದು, ಬೆಳಿಗ್ಗೆ 8 ಗಂಟೆಯಿಂದ ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದದ ಸಹಯೋಗದಲ್ಲಿ ಹೆಜಮಾಡಿ ಬೀಚ್, ಪಡುಬಿದ್ರಿ ಕರಾವಳಿ ಸ್ಟಾರ್‌ ನಡಿಪಟ್ನ ಸಹಯೋಗದೊಂದಿಗೆ ಪಡುಬಿದ್ರಿ ಬೀಚ್, ತೆಂಕ ಕರಾವಳಿ ಫ್ರೆಂಡ್ಸ್ ಸಹಯೋಗದೊಂದಿಗೆ ತೆಂಕ ಎರ್ಮಾಳ್ ಬೀಚ್ ಸ್ವಚ್ಚತಾ ಕಾರ್ಯಕ್ರಮ ಜರಗಲಿದೆ. ಜೂ. 23 ಸೋಮವಾರ ಪಡುಬಿದ್ರಿ ಮಧ್ವನಗರ ತರಂಗಣಿ ಮಿತ್ರ ಮಂಡಳಿ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 9 ಗಂಟೆಗೆ ಪಡುಬಿದ್ರಿ ಕರ್ನಾಟಕ ಪಬ್ಲಿಕ್ ಸ್ಕೂಲ್, 10-30 ಕ್ಕೆ ಹೆಜಮಾಡಿ ಸರಕಾರಿ ಪ್ರೌಢ ಶಾಲೆ, 12 ಗಂಟೆಗೆ ಪಲಿಮಾರು ಸರಕಾರಿ ಪ್ರೌಢ ಶಾಲೆ ಕಾರ್ಯಕ್ರಮವು ನೆರವೇರಲಿದೆ. ಜೂ. 24 ಮಂಗಳವಾರ ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವಾಹನ ಹೊಗೆ ತಪಾಸಣೆ ಬಗ್ಗೆ ಜಾಗೃತಿ ಮತ್ತು ಪರಿಸರ ಸಂರಕ್ಷಣಾ ಸ್ಟಿಕರ್ ಅಳವಡಿಕೆ ಕಾರ್ಯಕರ್ಮವು ಜರಗಲಿದೆ. ಬೆಳಿಗ್ಗೆ 9 ಗಂಟೆಗೆ ಪಡುಬಿದ್ರಿ ಬಸ್ ನಿಲ್ದಾಣ, 10-30ಕ್ಕೆ ಹೆಜಮಾಡಿ ಬಸ್ ನಿಲ್ದಾಣ, 12 ಗಂಟೆಗೆ ಎರ್ಮಾಳು ಬಸ್ ನಿಲ್ದಾಣದಲ್ಲಿ ಜಾಗೃತಿ ಕಾರ್ಯಕ್ರಮವು ಜರಗಲಿದ್ದು, ಜೆಸಿಐ ಪಡುಬಿದ್ರಿ ಮಾಜಿ ಅಧ್ಯಕ್ಷ ಜಯ ಎಸ್. ಶೆಟ್ಟಿ ಪದ್ರ ಮಾಹಿತಿ ನೀಡುವರು. ಜೂ. 25 ಬುಧವಾರ ಸೊಸೈಟಿಯ ಪ್ರಧಾನ ಕಾರ್ಯಾಲಯದಲ್ಲಿ ನವಶಕ್ತಿ ಮಹಿಳಾ ಮಂಡಳಿ ಮತ್ತು ನವಶಕ್ತಿ ವುಮೆನ್ಸ್ ವೆಲ್ ಫೇರ್ ಸೊಸೈಟಿ ಸಹಯೋಗದೊಂದಿಗೆ ವಿವಿಧ ಸಹಕಾರ ಸಂಘಗಳಿಗೆ ವ್ಯಾವಹಾರಿಕ ಪದ್ದತಿಗಳ ತರಬೇತಿ ಕಾರ್ಯಕ್ರಮ ಬೆಳಿಗ್ಗೆ 9-30 ರಿಂದ ಜರಗಲಿದ್ದು, ನ್ಯಾಯವಾದಿ ಶ್ರೀಧರ್ ಪಿ.ಎಸ್. ತರಬೇತಿ ನೀಡಲಿರುವರು. ಜೂ. 26 ಗುರುವಾರ ಸೊಸೈಟಿಯ ಪ್ರಧಾನ ಕಾರ್ಯಾಲಯದಲ್ಲಿ ಯುವವಾಹಿನಿ ಪಡುಬಿದ್ರಿ ಘಟಕದ ಸಹಯೋಗದೊಂದಿಗೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಚಿತ್ರಕಲಾ ಮತ್ತು ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಜೂ. 27 ಶುಕ್ರವಾರ ಗಣಪತಿ ಪ್ರೌಢ ಶಾಲೆ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಹೆಜಮಾಡಿ ಅಲ್-ಅಝಹರ್ ಶಾಲೆ, ಪಡುಬಿದ್ರಿ ಸಾಗರ ವಿದ್ಯಾ ಮಂದಿರ ಶಾಲೆ, ತೆಂಕ ಕಿನಾರ ಆಂಗ್ಲ ಮಾಧ್ಯಮ ಶಾಲೆ, ಶಾಲಾ ವಿಧ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ತರಬೇತಿ ಕಾರ್ಯಗಾರ ನಡೆಸುವರು. ಜೂ. 28 ಶನಿವಾರ ಜೆ.ಸಿ.ಐ. ಪಡುಬಿದ್ರಿ ಹಾಗೂ ಹೆಜಮಾಡಿ ಹಾಲು ಉತ್ಪಾದಕರ ಸಂಘದ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಕೃಷಿ ನಾಟಿಯ ಬಗ್ಗೆ ಪ್ರಾತ್ಯಕ್ಷಿತೆ ಕಾರ್ಯಕ್ರಮ ಮಧ್ಯಾಹ್ನ 1-30 ರಿಂದ ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗ ಕೃಷಿಕ ಶಿವರಾಮ ಎನ್. ಶೆಟ್ಟಿ ಮಟ್ಟಿಮನೆ ಇವರಿಂದ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಡಾ. ಎಮ್. ಎನ್.ಆರ್. ಭಾಗಿ ಜೂ. 29 ಭಾನುವಾರ ಬೆಳಿಗ್ಗೆ 9-30ರಿಂದ ಪಡುಬಿದ್ರಿ ಬಂಟರ ಭವನದಲ್ಲಿ ಸಮಾರೋಪ ಸಮಾರಂಭವು ಸಭಾ ಕಾರ್ಯಕ್ರಮದ ಮೂಲಕ ಪ್ರಾರಂಭಗೊಳ್ಳಲಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ. ಎಮ್. ರಾಜೇಂದ್ರ ಕುಮಾರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿರುವರು. ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರ ಸಂಘಗಳ ಉಪ ನಿಬಂಧಕಿ ಲಾವಣ್ಯ ಕೆ. ಆರ್, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕಿ ರೇಣುಕಾ ಜಿ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯ, ರಾಜ್ಯ ಕೆಎಮ್‌ಎಫ್ ನಿರ್ದೇಶಕ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ ಸುವರ್ಣ, ನಿವೃತ್ತ ಮುಖ್ಯ ಶಿಕ್ಷಕ ಅನಂತ ಪಟ್ಟಾಭಿರಾವ್ ಉಪಸ್ಥಿತರಿರುವರು.  ಬಳಿಕ ಸಂಘ ಸಂಸ್ಥೆಗಳಿಗೆ ಸಾಸ್ಕೃತಿಕ ಸ್ಪರ್ಧೆ ನಡೆಯಲಿದ್ದು, ಹತ್ತು ಸಂಸ್ಥೆಗಳು ಸ್ಪರ್ಧೆಯಲ್ಲಿ ಭಾಗವಹಿಸುವರು ಎಂದು ವೈ. ಸುಧೀರ್ ಕುಮಾರ್ ತಿಳಿಸಿದರು.ಸಂಜೆ 4 ಗಂಟೆಯಿಂದ ಸಮಾರೋಪ ಸಮಾರಂಭವು ನಡೆಯಲ್ಲಿದ್ದು, ಮುಖ್ಯ ಅತಿಥಿಗಳಾಗಿ, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ವೈ. ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ  ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ ಸುಕುಮಾರ್, ತಾಪಂ ಮಾಜಿ ಸದಸ್ಯ ನವೀನ್‌ಚಂದ್ರ ಜೆ ಶೆಟ್ಟಿ, ಹೆಜಮಾಡಿ ದೇವಳದ ಆಡಳಿತ ಮೊಕ್ತೇಸರ  ದಯಾನಂದ ಹೆಜಮಾಡಿ, ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ಪಾಲ್ಗೊಳ್ಳಲಿರುವರು. ಕರಪತ್ರ ಬಿಡುಗಡೆ  ಅಂತರಾಷ್ಟ್ರೀಯ ಸಹಕಾರ ವರ್ಷ-2025ರನ್ವಯ ಹಸಿರು ಜಾಗೃತಿ ಅಭಿಯಾನದ ಕರಪತ್ರವನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಗುರುರಾಜ ಪೂಜಾರಿ, ನಿರ್ದೇಶಕರಾದ ಗಿರೀಶ್ ಪಲಿಮಾರು, ಮಾಧವ ಅಚಾರ್ಯ, ವಾಸುದೇವ ದೇವಾಡಿಗ, ಶಿವರಾಮ ಶೆಟ್ಟಿ, ಕೃಷ್ಣ ಬಂಗೇರ, ರೋಹಿಣಿ, ಹಸನ್ ಬಾವ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಎಚ್.ಪುತ್ರನ್ ಉಪಸ್ಥಿತರಿದ್ದರು.

Exit mobile version