Site icon ಉಡುಪಿ ನ್ಯೂಸ್ ಪ್ಲಸ್

ಬಂಟಕಲ್‌ ತಾಂತ್ರಿಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಪುಸ್ತಕ ವಿತರಣಾ ಅಭಿಯಾನ

ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಕೇಂದ್ರ ಗ್ರಂಥಾಲಯ, ರಾಷ್ಟ್ರೀಯ  ಸೇವಾ ಯೋಜನೆ ಹಾಗೂ ರೊರಕ್ಟ್‌ ಘಟಕದ ಸಹಯೋಗದೊಂದಿಗೆ ಇನ್ನಂಜೆ ಎಸ್. ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪುಸ್ತಕ ವಿತರಣಾ ಅಭಿಯಾನವನ್ನು ಆಯೋಜಿಲಾಗಿತ್ತು. ಈ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಪರವಾಗಿ ಕೊಡುಗೆ ನೀಡಿದ ನೋಟ್‌ ಬುಕ್‌ಗಳು, ಸ್ಟೇಷನರಿ ವಸ್ತುಗಳು ಮತ್ತು ಕೊಡೆಗಳು ಸೇರಿದಂತೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಇದುಅವರ ಶೈಕ್ಷಣಿಕ ಬೆಳವಣಿಗೆ ಮತ್ತು ಯೋಗ ಕ್ಷೇಮವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಸೋದೆ ವಾದಿರಾಜ ಮಠದ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ  ಪ್ರೊ. ಡಾ. ರಾಧಾಕೃಷ್ಣಎಸ್ ಐತಾಳ್, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೊರಕ್ಟ್‌ ಘಟಕದ ಸಂಯೋಜಕ  ಸಚಿನ್ ಪ್ರಭು, ಎಸ್‌ಎಮ್ ವಿ ಐ ಟಿ ನ ಗ್ರಂಥಪಾಲಕ   ದೀಪಕ್‌ ಎಸ್ ಮತ್ತು ಇನ್ನಂಜೆ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ನಟರಾಜ್‌ ಉಪಾಧ್ಯಾಯ ಉಪಸ್ಥಿತರಿದ್ದರು.

Exit mobile version