ಉಡುಪಿ ನ್ಯೂಸ್ ಪ್ಲಸ್

ಕಾರ್ಕಳದಲ್ಲಿ ಯುನೈಟೆಡ್ ಟೊಯೋಟಾ ನೂತನ ಶೋರೂಮ್ ಉದ್ಘಾಟನೆ

ಕಾರ್ಕಳ: ಆನೆಕೆರೆ ಭವಾನಿ ಸರ್ಕಲ್ ಬಳಿಯ ಬಾಟ ಶೋರೂಮ್ ಎದುರು ಯುನೈಟೆಡ್ ಟೊಯೊಟೊದ ನೂತನ ಶೋರೂಮ್ ಟಿಸ್ಪರ್ಶ್ ಇದರ ಉದ್ಘಾಟನೆಯನ್ನು ಧರ್ಮಸ್ಥಳದ ಉಜಿರೆಯ ಎಸ್‌. ಡಿ. ಎಂ. ಕಾಲೇಜಿನ ಸಹಾಯಕ ಪ್ರಾದ್ಯಾಪಕ, ಮಾಜಿ ರೇಡಿಯೋ ಜಾಕಿ, ರೆಡಿಯೋ ಎಫ್. ಎಂ. ಡಾ | ಸುವೀ‌ರ್ ಜೈನ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇಂದು ಜನರಲ್ಲಿ ಇನೋವ ಕಾರ್‌ನ ಬೇಡಿಕೆ ತುಂಬಾ ಇದ್ದು ಕಾರ್ಕಳದಲ್ಲಿ ಸಂಸ್ಥೆ ಅವಶ್ಯಕತೆಯಿದ್ದು ಗ್ರಾಹಕರ ಸೇವೆಯಲ್ಲಿ ನಂ. ವನ್ ಆಗಿದೆ. ಅಪಾರ ಬೇಡಿಕೆಯ ಕಾರ್‌ನ್ನು ಬೇರೆ ಊರಿನಿಂದ ತರುವ ಬದಲಿಗೆ ಕಾರ್ಕಳದಲ್ಲಿ ಸಂಸ್ಥೆ ಪ್ರಾರಂಭವಾಗಿದ್ದು ಸಂತಸವಾಗಿದೆ ಎಂದರು.. ಇನೋರ್ವ ಅತಿಥಿ ಬಿ. *ಯುನೈಟೆಡ್ ಟೊಯೋಟಾ ಟಿಸ್ಪರ್ಶ ಶೋರೂಮ್ ಅನ್ನು ಉದ್ಯಮಿ ಗಣಪತಿ ಹೆಗ್ಡೆ ಉದ್ಘಾಟಿಸಿ ಮಾತನಾಡಿ, ಒಳ್ಳೆಯ ಉದ್ದೇಶಗಳೊಂದಿಗೆ ವ್ಯಾಪಾರ ಕ್ಷೇತ್ರದತ್ತ ಹೆಜ್ಜೆಯನಿಡಬೇಕು. ದೇವರ ದಯೆ, ಗುರು ಹಿರಿಯರ ಆಶೀರ್ವಾದದ ಜೊತೆಗೆ ಗ್ರಾಹಕರಿಗೆ ಸಂತೃಪ್ತಿ ಸಿಕ್ಕಾಗ ಹೆಚ್ಚಿನ ರೀತಿಯಲ್ಲಿ ಪ್ರಗತಿ ಹೊಂದಲು ಕಾರಣವಾಗುತ್ತದೆ. ಸ್ವರ್ಧಾತ್ಮಕ ಯುಗದಲ್ಲಿ ಆರೂರು ಕುಟುಂಬವು ಗ್ರಾಹಕರ ವಿಶ್ವಾಸಗಳಿಸಿಸುತ್ತಿರುವುದು ಶೋರೂಮ್‌ಗಳ ಸಂಖ್ಯೆ ವೃದ್ಧಿಗೆ ಕಾರಣವಾಗಿದೆ ಎಂದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯುನೈಟೆಡ್ ಟೊಯೋಟಾ ಡೀಲರ್ ಆಗಿರುವ ಆರೂರು ರಾಮ್ ಗೋಪಾಲ ರಾವ್ ಮಾತನಾಡಿ, ಸಂಸ್ಥೆ ಸಾಗಿ ಬಂದ ಬಗ್ಗೆ ಮಾಹಿತಿ ನೀಡಿ ಸಿಬ್ಬಂದಿಗಳ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.. ಯುನೈಟೆಡ್ ಟೊಯೊಟೊದ ದ.ಕ., ಉಡುಪಿ, ಉ.ಕನ್ನಡ ಜಿಲ್ಲೆಯ ವಿತರಕ ಸಂಸ್ಥೆಯ ಎಂ. ಡಿ. ಆರೂರು ರಾಮ್ ಗೊಪಾಲ್ ರಾವ್‌ರವರು ಹಾಗೂ ಸಂಸ್ಥೆಯ ಸಿ. ಇ. ಒ. ರಮೇಶ್ ಪ್ರಭು ಉಪಸಿತ್ಥರಿದ್ದರು. ಕಾರ್ಯಕ್ರಮವನ್ನು ಕಾರ್ತೀಕ್ ನಿರೂಪಿಸಿದರು. ಪ್ರಥಮ ಗ್ರಾಹಕರಾಗಿ ನಕ್ರೆಯ ವಿಕ್ಟರ್ ಮತ್ತು ಕುಟುಂಬಸ್ಥರು ಕಾರನ್ನು ಖರೀದಿಸಿದರು.

Exit mobile version