Site icon ಉಡುಪಿ ನ್ಯೂಸ್ ಪ್ಲಸ್

ಕ್ಷತ್ರಿಯ ಮರಾಠ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿ ವೇತನ ವಿತರಣೆ ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ

ಕಾರ್ಕಳ: ಕ್ಷತ್ರಿಯ ಮರಾಠ ಸಮಾಜ (ರಿ.) ಕಾರ್ಕಳ, ಇದರ ಆಶ್ರಯದಲ್ಲಿ ರ್‍ಯಾಂಕ್‌ ವಿಜೇತ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಅದಿತ್ಯವಾರ ನಡೆಯಿತು. ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಶುಭದರಾವ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ ಉಮೇಶ್ ರಾವ್ ಉದ್ಘಾಟಿಸಿದರು. ಕಲಬುರಗಿಯ ಶರಣಬಸವ ವಿಶ್ವವಿದ್ಯಾನಿಲಯದ ಸಂಗೀತ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಶ್ರುತಿ ಸಿಂಧೆ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ 9 ರ್ಯಾಂಕ್ ಪಡೆದ ಸಂಪ್ರೀತ್ ಭೋಂಸ್ಲೆ ಮತ್ತು ಎಸ್.ಎಸ್‌.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 20 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಸಮಾಜದ 110‌ ವಿದ್ಯಾರ್ಥಿಗಳಿಗೆ 1.22 ಲ‌ಕ್ಷ‌ ರೂ ವಿದ್ಯಾರ್ಥಿ ವೇತನ ಮತ್ತು ಕೊಡೆಗಳನ್ನು ವಿತರಿಸಲಾಯಿತು. ಶೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ‌ ಮಂಡಲಿಯ ವತಿಯಿಂದ ಶುಭದರಾವ್ ಹಾಗೂ ಪುರಸಭಾ ಸದಸ್ಯ ಶಿವಾಜಿ ರಾವ್ ಜಾಧವ್ ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ್ ಗಿರೀಶ್ ರಾವ್, ಕೆ.ಕೆ.ಎಮ್‌.ಪಿ. ತಾಲೂಕು‌ ಘಟಕದ ಅಧ್ಯಕ್ಷ ಕೀರ್ತನ್ ಲಾಡ್, ಪೆರ್ವಾಜೆ ಶಾಲೆಯ ಸಂಗೀತ ಶಿಕ್ಷಕ ಕೃಷ್ಣಪ್ಪ ಶಿಂಧೆ, ಇ-ಲಾಜಿಕ್ಸಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸಿ.ಇ.ಒ ದಿನೇಶ್ ಶೆಟ್ಟಿ, ಮೊಕ್ತೇಸರರಾದ ರಾಮಚಂದ್ರರಾವ್, ದಯಾನಂದ ಶಿಂಧೆ ಉಪಸ್ಥಿತರಿದ್ದರು ಕಾರ್ಯದರ್ಶಿ ಪ್ರಸನ್ನ ಸ್ವಾಗತಿಸಿದರು, ಶಿಕ್ಷಕಿ ಆಶಾಲತಾ ಗಿರೀಶ್ ವಿದ್ಯಾರ್ಥಿಗಳ ವಿವರ ವಾಚಿಸಿದರು, ಪ್ರಕಾಶ್ ರಾವ್ ಸಾಣೂರು ಧನ್ಯವಾದವಿತ್ತರು. ಶಿಕ್ಷಕ ಹರೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Exit mobile version