Site icon ಉಡುಪಿ ನ್ಯೂಸ್ ಪ್ಲಸ್

ರಿಲಯನ್ಸ್ ಎಸೋಸಿಯೇಶನ್ ನ ನೂತನ ಅಧ್ಯಕ್ಷರಾಗಿ ಆರಿಶ್ ನವರಂಗ್ ಆಯ್ಕೆ

ರಿಲಯನ್ಸ್ ಎಸೋಸಿಯೇಶ (ರಿ ) ಬೊಳ್ಳೂರು ಇದರ ನೂತನ ಅಧ್ಯಕ್ಷರಾಗಿ ಆರಿಶ್ ನವರಂಗ್ ಆಯ್ಕೆಯಾಗಿದ್ದಾರೆ. ಅಕ್ಟ‌ರ್ ಬೊಳ್ಳೂರು ರವರ ಅಧ್ಯಕ್ಷತೆಯಲ್ಲಿ ರಿಲಯನ್ಸ್ ಭವನದಲ್ಲಿ ನಡೆದ ಸಂಸ್ಥೆಯ 29ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಯಾಸೀನ್ ಪಟೇಲ್, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಟ‌ರ್ ಬೊಳ್ಳೂರು, ಕಾರ್ಯದರ್ಶಿಯಾಗಿ ಅಕ್ಸಮ್ ಅಲ್ ಅಕ್ಸಾ, ಲೆಕ್ಕ ಪರಿಶೋಧಕರಾಗಿ ಎಂ.ಎ ಇಕ್ಬಾಲ್, ಮಾಧ್ಯಮ ಉಸ್ತುವಾರಿಯಾಗಿ ಅಬ್ದುಲ್ ಮುಬಾರಕ್, ಜಿಸಿಸಿ ಸಂಯೋಜಕರಾಗಿ ಶಮೀಮ್ ಬೊಳ್ಳೂರು, ಕ್ರೀಡಾ ಉಸ್ತುವಾರಿಯಾಗಿ ರಶಾದ್ ಎಂ.ಎಂ. ಸ್ವಯಂಸೇವಕ ಉಸ್ತುವಾರಿಯಾಗಿ ಮಮ್ತಾಜ್ ಕಲ್ಲಾಪು, ಹಕೀಮ್ ಇಂದಿರಾನಗರ ಅವರು ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮೊಯಿದಿನ್ ಇಂದಿರಾನಗರ, ಕಲಂದರ್ ಕೌಶಿಕ್, ಫಾರೂಕ್ ಫ್ಯಾನ್ಸಿ ಹಾಗೂ ರಿಯಾಜ್ ಕೊಪ್ಪಳ ಅವರನ್ನು ಆಯ್ಕೆ ಮಾಡಲಾಯಿತು. ರಿಲಯನ್ಸ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಎಂ.ಎ ಇಕ್ಟಲ್ ವಾರ್ಷಿಕ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ರಿಲಯನ್ಸ್ ಎಸೋಸಿಯೇಶನ್‌ ಸೌದಿ ಘಟಕದ ಅಧ್ಯಕ್ಷರಾದ ಜಲೀಲ್ ನವರಂಗ್ ಉಪಸ್ಥಿತರಿದ್ದರು.

Exit mobile version