ಉಡುಪಿ ನ್ಯೂಸ್ ಪ್ಲಸ್

ಉದ್ಯಾವರ : ಗ್ರಾಪಂ ಉಪ ಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

ಉದ್ಯಾವರ : ಉದ್ಯಾವರ ಗ್ರಾಮ ಪಂಚಾಯತ್ ನ 9ನೇ ವಾರ್ಡ್ ನಡೆದ ಉಪಮನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದಯಾನಂದ ಕೋಟ್ಯಾನ್ ಗೆಲುವು ಸಾಧಿಸಿದ್ದಾರೆ.ಇಂದು ಕಾಪುವಿನ ಪ್ರಜಾ ಸೌಧದಲ್ಲಿ ಮತ ಎಣಿಕೆ ನಡೆದಿದ್ದು, ದಯಾನಂದ ಕೋಟ್ಯಾನ್ 304 ಮತಗಳನ್ನು ಗಳಿಸಿ ವಿಜಯಿಯಾದರೆ, ಪ್ರತಿಸ್ಪರ್ಧಿ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿ ಪ್ರಶಾಂತ್ ಕೋಟ್ಯಾನ್ 190 ಮತಗಳನ್ನಷ್ಟೇ ಗಳಿಸಲು ಶಕ್ತರಾದರು. ಅಸಿಂಧು ‌ ‌‌‌‌‌ – 2 ಮತ ಈ ಹಿಂದೆ ಉದ್ಯಾವರ ಗ್ರಾಮ ಪಂಚಾಯಸ್ ನ 9ನೇ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಾಗಿದ್ದ ಮೊರಾನ್ ದೇಸಾ ನಿಧನರಾದ ಹಿನ್ನೆಲೆಯಲ್ಲಿ ಮೇ 25ರಂದು ಉಪ ಚುನಾವಣೆ ನಡೆದಿತ್ತು. ಈ ವಾರ್ಡ್ ನಲ್ಲಿ ಒಟ್ಟು 496 ಮತಗಳು ಚಲಾವಣೆಯಾಗಿತ್ತು,

Exit mobile version