Site icon ಉಡುಪಿ ನ್ಯೂಸ್ ಪ್ಲಸ್

ಬ್ರಹ್ಮವಾರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಪದಗ್ರಹಣ ಉದ್ಘಾಟಿಸಿದ – ಐವನ್ ಡಿ’ ಡಿಸೋಜ

ಸೋಮವಾರ ಇಲ್ಲಿನ ಬಂಟರ ಭವನದಲ್ಲಿ ಬ್ರಹ್ಮಾವರ ಕಾಂಗ್ರೆಸ್ ನೂತನ ಬ್ಲಾಕ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ ಪದಗ್ರಹಣ ಕಾಠ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇದು ಅಧಿಕಾರವಲ್ಲ, ಪಕ್ಷ ಕಟ್ಟಿ ಬೆಳೆಸುವ ಅವಕಾಶ. ಕಾರ್ಯಕರ್ತರ ಭಾವನೆಗಳನ್ನು ಅರ್ಥೈಸಿಕೊಂಡು ಸಂಘಟಿಸಬೇಕು ರಾಜ್ಯ ಕಾಂಗ್ರೆಸ್ ಸರಕಾರ ಯಾವುದೇ ಮಧ್ಯವರ್ತಿಗಳಿಲ್ಲದೆ ವ್ಯವಸ್ಥಿತವಾಗಿ ಗ್ಯಾರಂಟಿ ಭಾಗ್ಯಗಳನ್ನು ಜಾರಿಗೆ ತಂದಿದೆ. ವಾರ್ಷಿಕ 52 ಸಾವಿರ ಕೋಟಿ ನೀಡುವ ಈ ಯೋಜನೆ ದೇಶದಲ್ಲೇ ಪ್ರಥಮ. ಗ್ಯಾರಂಟಿ ಯೋಜನೆ ತಂದಾಗ ಸರಕಾರ ಒಂದು ವರ್ಷವೂ ಉಳಿಯುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದರು. ಈಗ ಎರಡು ವರ್ಷ ಯಶಸ್ವೀಯಾಗಿ ಪೂರೈಸಿದೆ. ಅಭಿವೃದ್ಧಿ ಪರ್ವವೂ ಪ್ರಾರಂಭಗೊಂಡಿದೆ ಎಂದರು. ಪಕ್ಷ ಇದ್ದರೆ ಮಾತ್ರ ನಾಯಕನಿರಲು ಸಾಧ್ಯ. ಗ್ರಾಮ ಮಟ್ಟದಲ್ಲಿ ಪಕ್ಷ ಕಟ್ಟಿ ಬೆಳೆಸುವುದು ನಮ್ಮ ಮೊದಲ ಗುರಿ ಎಂದು ರಾಘವೇಂದ್ರ ಕರ್ಜೆ ಹೇಳಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಶ್ರೀ ಅಶೋಕ್ ಕುಮಾರ್ ಕೊಡವೂರು,ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ ಶ್ರೀ ಎಮ್. ಎ ಗಪೂರ್, ಮಾಜಿ ಸಂಸದರಾದ ಶ್ರೀ ಜಯಪ್ರಕಾಶ್ ಹೆಗ್ಡೆ ಕಾರ್ಯಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್ , ಕೆಪಿಸಿಸಿ ಉಡುಪಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ಲಾವಣ್ಯ ಬಲ್ಲಾಲ್ ಹಾಗೂ ಪಕ್ಷದ ಮುಖಂಡರುಗಳಾದ , ಮುನಿಯಾಲು ಉದಯಕುಮಾರ್ ಶೆಟ್ಟಿ , ಹರಿಪ್ರಸಾದ್ ರೈ ,ಉಡುಪಿ ಜಿಲ್ಲಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳು, ಜಿಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು, ಜಿಲ್ಲೆಯ ಕೆಪಿಸಿಸಿ ಪದಾಧಿಕಾರಿಗಳು, ಕರ್ನಾಟಕ ಸರ್ಕಾರ ಉಡುಪಿ ಜಿಲ್ಲೆಯ ನಾಮ,ನಿರ್ದೇಶಿತ ಸದಸ್ಯರು, ಪಕ್ಷದ ಯುವ ಮುಖಂಡರುಗಳು ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version