ಉಡುಪಿ ನ್ಯೂಸ್ ಪ್ಲಸ್

ಜಗತ್ತಿನಾದ್ಯಂತ ಸಡಗರ ಸಂಭ್ರಮದ ಬಕ್ರೀದ್ ಹಬ್ಬಆಚರಣೆ

ಉಡುಪಿ : ತ್ಯಾಗಬಲಿದಾನಗಳ ಪ್ರತೀಕವಾದ ಈದುಲ್ ಆದ್ಹಾ (ಬಕ್ರೀದ್ ಹಬ್ಬ) ಭಾನುವಾರ ಇಲ್ಲಿವ ಉಚ್ಚಿಲ ಇಬ್ರಾಹಿಂ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ವಿಶೇಷ ಪ್ರಾರ್ಥನೆ ನಡೆಸುವುದರ ಮೂಲಕ ಅತ್ಯಂತ ಸಡಗರ ಸಂಭ್ರದಿಂದ ಆಚರಿಸಲಾಯಿತು. 

 

 

ಪತ್ನಿಯೊರೊಂದಿಗೆ, ಪುತ್ರರೊಂದಿಗೆ ತನ್ನ ಆಧೀನ ಇರುವ ಎಲ್ಲರೊಂದಿಗೆ ಸದ್ವರ್ತನೆ ತೋರುವುದು ಕೂಡ ದೇವನ ಮೇಲಿನ ಪ್ರೀತಿಯ ದ್ಯೋತಕವಾಗಿದೆ. ತನ್ನ ಸಹೋದರನಿಗೆ ನಷ್ಟ ಮತ್ತು ಹಾನಿಯುಂಟು ಮಾಡಿ ತಾವು ಸುಖದಿಂದ ಇರುತ್ತೇನೆ ಎಂದು ಭಾವಿಸುವವರು ದೇವನ ಕ್ರೋಧಕ್ಕೆ ಪಾತ್ರರಾಗುತ್ತಾರೆ. ಹಸಿದವನಿಗೆ ಉಣಿಸುವುದು, ಉಡುಪು ಇಲ್ಲದವರಿಗೆ ಉಡುಪನ್ನು ಕೊಡುವುದು, ರೋಗಿಯನ್ನು ಸಂದರ್ಶಿಸುವುದು, ಸಮಾಜದಲ್ಲಿ ಶಾಂತಿಯಙಟು ಮಾಡುವಲ್ಲಿ ಪ್ರಯತ್ನಿಸುವುದು ಇವೆಲ್ಲವೂ ಕೂಡ ದೇವನ ಪ್ರೀತಿಯೆ ಆಗಿದೆ. ಏಕೆಂದರೆ ದೇವನು ಶಾಂತಿಯನ್ನು ಬಯಸುತ್ತಾನೆ. ದೇಶದ ಕಾನೂನು ಪಾಲಿಸುವುದು ಕೂಡ ದೇವನ ಮೇಲಿನ ಪ್ರೀತಿಯೆ ಆಗಿದೆ. ನೆರೆಹೊರೆಯವರನ್ನು ಪ್ರೀತಿಸುವುದು, ಅವರಿಗೆ ಯಾವುದೇ ತೊಂದರೆಯನ್ನು ನೀಡದೆ ಇರುವುದು, ಸಮಾಜದಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸುವುದು ಇವೆಲ್ಲವೂ ಕೂಡ ಇಸ್ಲಾಮ್ ಧರ್ಮದ ಆಚರಣೆಯ ಒಂದು ಭಾಗವಾಗಿದೆ ಅಲ್ಲಾಹನ ಮತ್ತು ಅಲ್ಲಾಹನ ದಾಸರ ಹಕ್ಕುಗಳನ್ನು ಪಾಲಿಸುವುದು ನಮ್ಮೆಲ್ಲ ಕರ್ತವ್ಯವಾಗಿದೆ ಎಂದರು.

Exit mobile version