Site icon ಉಡುಪಿ ನ್ಯೂಸ್ ಪ್ಲಸ್

ಕಾಪು : ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ, ” *ಸೌಹಾರ್ದ – ಇಫ್ತಾರ್ ಕೂಟ ” ಕಾರ್ಯಕ್ರಮ

ಮುಸಲ್ಮಾನರ ಉಪವಾಸದ ಪವಿತ್ರ ಮಾಸವಾದ ರಂಜಾನ್ ತಿಂಗಳ ಪ್ರಯುಕ್ತ, ಸೌಹಾರ್ದತೆ ಮತ್ತು ಸಮಾನತೆಯ ಪ್ರತೀಕವಾಗಿ, ಕಾಪು ವಿ. ಸ. ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ, ಕೆ. ಪಿ. ಸಿ. ಸಿ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ, ” *ಸೌಹಾರ್ದ – ಇಫ್ತಾರ್ ಕೂಟ ” ಕಾರ್ಯಕ್ರಮ ವನ್ನು, ದಿನಾಂಕ – 29/03/2025, ಶನಿವಾರ ದಂದು, ಕಾಪು – ಕೊಪ್ಪಲಂಗಡಿಯಲ್ಲಿರುವ, *ಕಮ್ಯುನಿಟಿ ಹಾಲ್ ಸಭಾಭವನ ದಲ್ಲಿ, ಸಂಜೆ ಗಂಟೆ : 4.30 ರಿಂದ ಆಯೋಜಿಸಲಾಗಿದೆ.
ವಿವಿಧ ಸಮುದಾಯದ ಗಣ್ಯರ ಸಮಾಗಮದಲ್ಲಿ, ಸೌಹಾರ್ದಾತೆಯ ಸಂದೇಶದ ದ್ಯೋತಕ ವಾಗಲಿರುವ ಈ ಕಾರ್ಯಕ್ರಮಕ್ಕೆ, ಪಕ್ಷದ ಎಲ್ಲಾ ಮುಖಂಡರು, ವಿವಿಧ ಸಮಿತಿ / ಘಟಕ / ವಿಭಾಗಗಳ ಅಧ್ಯಕ್ಷರು / ಪದಾಧಿಕಾರಿಗಳು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕ ಬಂಧುಗಳನ್ನು ಕೂಡಾ ಆಹ್ವಾನಿಸುತ್ತಾ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ತಿಸಿದ್ದಾರೆ

Exit mobile version