ಉಡುಪಿ ನ್ಯೂಸ್ ಪ್ಲಸ್

ಹೆದ್ದಾರಿಯಲ್ಲಿ ಒಂದು ವಾರದಿಂದ ಕೆಟ್ಟು ನಿಂತ ಟ್ಯಾಂಕರ್

ಕಟಪಾಡಿ : ತಾಂತ್ರಿಕ ಕಾರಣದಿಂದ ಕೆಟ್ಟ ಟ್ಯಾಂಕರ್ ಕಳೆದು 1 ವಾರದಿಂದ ಹೆದ್ದಾರಿಯ ಒಂದು ಬದಿಯಲ್ಲಿ ಅಡ್ಡಲಾಗಿ ನಿಂತ ಘಟನೆ ಕಾಪು ರಾಷ್ಟ್ರೀಯ ಹೆದ್ದಾರಿಯ ಕಟಪಾಡಿ ಜಂಕ್ಷನ್ನಲ್ಲಿ ನಡೆದಿದೆ.

ಕೆಟ್ಟು ನಿಂತ ಲಾರಿಯ ಅನತಿ ದೂರದಲ್ಲಿ ಬ್ಯಾರಿಗೇಟ್ ಅಳವಡಿಸಿದ್ದರೂ ಕೂಡ ಮಳೆಗಾಲದ ವೇಳೆ ಹಾಗೂ ಒವರ್ ಟೇಕ್ ಮಾಡುವ ಸಂದರ್ಭ ವಾಹನ ಸವಾರರಿಗೆ ಈ ಟ್ಯಾಂಕರ್ ಪ್ರಾಣಕಂಕಟವಾಗಿ ಪರಿಣಮಿಸಿದೆ.

ಇನ್ನು ಕೆಟ್ಟು ನಿಂತ ಟ್ಯಾಂಕರ್‌ನ 20ಮೀ. ದೂರದಲ್ಲೇ ಕಟಪಾಡಿ ಹೊರಪೊಲೀಸ್ ಠಾಣೆ ಇದ್ದರೂ ಈ ವರೆಗೆ ಟ್ಯಾಂಕರನ್ನು ತೆರವುಗೊಳಿಸಿಲ್ಲ. ಹೆದ್ದಾರಿಯಲ್ಲಿ ಕೆಟ್ಟು ನಿಂತ ಟ್ಯಾಂಕರ್ ತೆರವು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Exit mobile version