ಉಡುಪಿಯ ಪ್ರತಿಷ್ಠಿತ ನೇತ್ರಜ್ಯೋತಿ ಕಾಲೇಜಿನಲ್ಲಿ ‘ಸಿಬ್ಬಂದಿ ತರಬೇತಿ ಮತ್ತು ನೈತಿಕತೆ” ಎಂಬ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ| ಡಾಮಿನಿಕ್ ಪ್ರೊಫೆಸರ್ ಹಾಗೂ ನಿರ್ದೇಶಕರು ಕನ್ನಡ ಅಧ್ಯಯನ ವಿಭಾಗ ಜ್ಞಾನ ಭಾರತಿ ಬೆಂಗಳೂರು, ಇವರು ಒಂದು ಸಂಸ್ಥೆಯ ಶಕ್ತಿ ದೌರ್ಬಲ್ಯ ಅವಕಾಶಗಳು ಮತ್ತು ಬಲವನ್ನು ಗುರುತಿಸುವುದು ಮತ್ತು ವಿಶ್ಲೇಷಿಸಲು ಸಹಾಯ ಮಾಡುವ ವಿಧಾನದ ಕುರಿತು ವಿವರವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀಮತಿ ರಶ್ಮಿ ಕೃಷ್ಣಪ್ರಸಾದ್ ರವರು ಈ ತರಬೇತಿ ಕಾರ್ಯಕ್ರಮಗಳ ಉಪಯೋಗಗಳು ಎಲ್ಲಾ ಸಿಬ್ಬಂದಿಗಳು ಪಡೆಯುವಂತಾಗಬೇಕು ಎಂದರು. ವೇದಿಕೆಯಲ್ಲಿ ಕಾಲೇಜಿನ ಸಿ.ಓ.ಓ ಡಾ| ಗೌರಿ ಪ್ರಭು, ಪ್ರಸಾದ್ ನೇತ್ರಾಲಯದ ಆಡಳಿತ ಅಧಿಕಾರಿ ಶ್ರೀಮಧ್ವವಲ್ಲಭ ಆಚಾರ್ಯ, ಎಚ್.ಆರ್ ತಾರಾ ಶಶಿಧರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಮೇಘನಾ ರವರು ನಿರೂಪಿಸಿದರು
ನೇತ್ರಜ್ಯೋತಿ ಕಾಲೇಜಿನಲ್ಲಿ ಸಿಬ್ಬಂದಿ ತರಬೇತಿ ಮತ್ತು ನೈತಿಕತೆ ಕಾರ್ಯಗಾರ

