Site icon ಉಡುಪಿ ನ್ಯೂಸ್ ಪ್ಲಸ್

ಮಾ.9 ಉಡುಪಿ ಪ್ರಸಾದ್ ನೇತ್ರಾಲಯ ‘ಲಾಸಿಕ್ ಲೇಸರ್’ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ

ಉಡುಪಿ: ಪ್ರಸಾದ್‌ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಉಡುಪಿ ಕೇಂದ್ರದಲ್ಲಿ ‘ಲಾಸಿಕ್ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರ’ವು ಮಾರ್ಚ್ 9, ಭಾನುವಾರದಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ. 18 ವರ್ಷ ಪ್ರಾಯದಿಂದ ಸುಮಾರು 40 ವರ್ಷ ಪ್ರಾಯದವರೆಗಿನವರಿಗೆ ಮಾಡಬಹುದಾದ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾಂಟಾಕ್ಟ್ ಲೆನ್ನಿಂದ ಮುಕ್ತಿ ಹೊಂದಬಹುದಲ್ಲದೇ ಈ ಚಿಕಿತ್ಸೆಯಿಂದ 5 ನಿಮಿಷಗಳಲ್ಲಿ ಪರಿಶುದ್ಧವಾದ ದೃಷ್ಟಿಯನ್ನು ಪಡೆಯಬಹುದು. ಚಿಕಿತ್ಸೆಯ ನಂತರ ಕೂಡಲೇ ರೋಗಿಯು ತನ್ನೆಲ್ಲಾ ದೈನಂದಿನ ಚಟುವಟಿಕೆಗಳನ್ನು ಮಾಡಬಹುದು. ಯಾವುದೇ ನೋವು ಈ ಚಿಕಿತ್ಸೆಯಿಂದ ಉಂಟಾಗುವುದಿಲ್ಲ. ಶಿಬಿರದಲ್ಲಿ ದೃಷ್ಟಿ ಪರೀಕ್ಷೆ, ಕಣ್ಣಿನ ನರಪರೀಕ್ಷೆ, ಟೋಪೋಗ್ರಫಿ ಸ್ಕ್ಯಾನ್ (ಶಸ್ತ್ರ ಚಿಕಿತ್ಸೆಗೆ ಮೊದಲು ಮಾಡುವ ಪರೀಕ್ಷೆ) ಮೊದಲಾದುವುಗಳನ್ನು ಉಚಿತವಾಗಿ ಮಾಡಲಾಗುವುದು. ಚಿಕಿತ್ಸೆಗೆ ಅರ್ಹವಾದ ರೋಗಿಗಳಿಗೆ ಲಾಸಿಕ್ ಲೇಸರ್ ಚಿಕಿತ್ಸೆಯನ್ನು ಉಚಿತವಾಗಿ ನಡೆಸಲಾಗುವುದು. ಹೆಚ್ಚಿನ ವಿವರಗಳಿಗೆ 9482863095, 8792882134 ಈ ನಂಬರನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ

Exit mobile version