Site icon ಉಡುಪಿ ನ್ಯೂಸ್ ಪ್ಲಸ್

ದ.ಸಂ.ಸ ಮೈಸೂರು ವಿಭಾಗದ ಸಂಘಟನಾ ಸಂಚಾಲಕರಾಗಿಶ್ಯಾಮರಾಜ್ ಬಿರ್ತಿ ಆಯ್ಕೆ…..

ತಾರೀಖ 04 – 03 – 2025 ರಂದು ಮೈಸೂರಿನ ರೋಟರಿ ಭವನದಲ್ಲಿ ನಡೆದ ಚಾಮರಾಜನಗರ , ಹಾಸನ , ಚಿಕ್ಕಮಗಳೂರು , ಶಿವಮೊಗ್ಗ , ಉಡುಪಿ , ದಕ್ಷಿಣ ಕನ್ನಡ , ಮೈಸೂರು , ಮಂಡ್ಯ ಜಿಲ್ಲೆಯನ್ನೊಳಗೊಂಡ 8 ಜಿಲ್ಲೆಗಳ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮೈಸೂರು ವಿಭಾಗದ ಮಟ್ಟದ ಸರ್ವ ಸಧ್ಯಸರ ಸಭೆ ಮತ್ತು ದಲಿತ ಚಳುವಳಿಯ ವರ್ತಮಾನದ ಸವಾಲುಗಳು ಮತ್ತು ಮಾರ್ಗೋಪಾಯಗಳು ವಿಚಾರ ಸಂಕಿರಣ ನಡೆಯಿತು. ದ.ಸಂ.ಸ. ಅಂಬೇಡ್ಕರ್ ವಾದ ರಾಜ್ಯ ಪ್ರಧಾನ ಸಂಚಾಲಕರಾದ ಅಣ್ಣಾ ಮಾವಳ್ಳಿ ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗೀಯ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಡುಪಿ ಜಿಲ್ಲೆಯಲ್ಲಿ ಸುಮಾರು ಮೂರು ದಶಕಗಳಿಂದ ದಲಿತ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ , ಚಲೋ ಉಡುಪಿ , ಮುಂತಾದ ಐತಿಹಾಸಿಕ ಚಳುವಳಿಯನ್ನು ಸಂಘಟಿಸಿದ , ತುಮಕೂರು ಚಲೋ , ಬಿಜಾಪುರ ಚಲೋ , ಮಡಿಕೇರಿ ಚಲೋ ಮುಂತಾದ ರಾಜ್ಯ ಮಟ್ಟದ ಹೋರಾಟದಲ್ಲಿ ತನ್ನನ್ನು ಅರ್ಪಿಸಿಕೊಂಡಂತಹ , ದೇಶದ ಯಾವುದೇ ಮೂಲೆಯಲ್ಲಿ ಧೌರ್ಜನ್ಯಗಳಾದಗಲೂ ಅದರ ವಿರುಧ್ಧ ಸಿಡಿದೆದ್ದು ಪ್ರತಿಭಟನೆಯನ್ನು ಸಂಘಟಿಸುವ ನಮ್ಮ ಉಡುಪಿ ಜಿಲ್ಲೆಯ ಕ್ರಿಯಾತ್ಮಕ ದಲಿತ ಹೋರಾಟಗಾರ ಶ್ಯಾಮರಾಜ್ ಬಿರ್ತಿ ಯವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸುಂದರ ಮಾಸ್ತರ್ ಮತ್ತು ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಇವರವತಿಯಿಂದ ಸಮಸ್ತ ಉಡುಪಿ ಜಿಲ್ಲೆಯ ದ.ಸಂ.ಸ.ಅಂಬೇಡ್ಕರ್ ವಾದದ ಅಬಿನಂಧನೆಗಳು.

Exit mobile version