ಸಾಸ್ತಾನ-ಪಾಂಡೇಶ್ವರದಲ್ಲಿ ನೂತನವಾಗಿ ಆರಂಭಗೊಂಡ ಕೋಸ್ಟಲ್ ಪ್ಯಾರಡೈಸ್ ವಾಣಿಜ್ಯ ಸಂಕೀರ್ಣ ಸಂಸ್ಥೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ. ಮಾತನಾಡಿದ ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಈಶಪ್ರಿಯ ಸ್ವಾಮೀಜಿಗಳು ಕೋಸ್ಟಲ್ ಪ್ಯಾರಡೈಸ್ ಸಂಸ್ಥೆಯನ್ನು ಅತ್ಯಂತ ಸುಂದರವಾಗಿ ರೂಪಿಸಿದ್ದು, ಮುಂದೆ ನೂರಾರು ಮಂದಿಗೆ ಉದ್ಯೋಗ ಕಲ್ಪಿಸುವ, ಸಮಾಜಕ್ಕೆ ಒಳಿತಾಗುತ್ತದೆ ಎಂದು ತಿಳಿಸಿದರು. ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಬಿ.ಎಂ. ಭಟ್ .ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯಿಂದ ಉದ್ಯಮಗಳಿಗೆ ಪರವಾನಿಗೆ ಪಡೆಯುವಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ ಹಾಗೂ ಕೆಲವೊಮ್ಮೆ ಕಚೇರಿಯಿಂದ-ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಆದರೆ ನಾವು ಸಾಸ್ತಾನದಲ್ಲಿ ಉದ್ದೇಶಿತ ಕೋಸ್ಟಲ್ ಪ್ಯಾರಡೈಸ್ ಸಂಸ್ಥೆಯ ಪರವಾನಿಗೆಗಾಗಿ ಪ್ರವಾ ಸೋದ್ಯಮ ಇಲಾಖೆಯಲ್ಲಿ ಕೋರಿದಾಗ ಇಲಾಖೆಯೇ ಮೆಚ್ಚಿ ಯಾವುದೇ ಸಮಸ್ಯೆಗಳಿಲ್ಲದೆ ಪರವಾನಿಗೆ ನೀಡಿದೆ

ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತ ಪರವಾನಿಗೆ ಪಡೆದಸಂಸ್ಥೆ ಇದಾಗಿದ್ದು ಬೋರ್ಡಿಂಗ್, ಲಾಡ್ಡಿಂಗ್, ಕಾನ್ಸರೆನ್ಸ್ ಹಾಲ್, ಮದುವೆ ಹಾಲ್, ಡಿಲಕ್ಸ್ ರೂಮ್ಸ್ ಮತ್ತು ಸೂಟ್ಸ್ ಕೋಸ್ಟಲ್ ಸಸ್ಯಾಹಾರಿ ಉಪಾಹಾರಗೃಹ ಮುಂತಾದ ಸೌಲಭ್ಯಗಳನ್ನು ಸಂಕೀರ್ಣ ಒಳಗೊಂಡಿದೆ ಎಂದು ಸಾಸ್ತಾನದ ಕೋಸ್ಟಲ್ ಪ್ಯಾರಡೈಸ್ ಸಂಸ್ಥೆಯ ಆಡಳಿತ ಪಾಲುದಾರ ಬಿ.ಎಂ. ಭಟ್ ತಿಳಿಸಿದರು..
ಈ ಸಂದರ್ಭದಲ್ಲಿ ಗೀತಾನಂದಫೌಂಡೇಶನ್‌ನ ಆನಂದ ಸಿ.ಕುಂದರ್, ಪಾಂಡೇಶ್ವರ ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಪೂಜಾರ್ತಿ, ಕೆ.ಎಸ್. ಎಫ್.ಸಿ. ಮ್ಯಾನೇಜರ್ ಆರ್.ಪ್ರಸಾದ್, ಸಿವಿಲ್ ಎಂಜಿನಿಯರ್ ಗೋಪಾಲ ಭಟ್, ಸಿಎ ದೇವ್ ಆನಂದ್, ಉದ್ಯಮಿ ಶೇಡಿಕೊಡು ವಿಠ್ಠಲ ಶೆಟ್ಟಿ ಮತ್ತು ಸಂಸ್ಥೆಯ ಆಡಳಿತ ಪಾಲುದಾರರಾದ ವೀಣಾ ಬಿ.ಎಂ. ಭಟ್, ಉಷಾ ಮಲಾಕ್ಷಿ ಪ್ರಕಾಶ್ ಉಡುಪ, ಸುಪ್ರೀತಾ ಸತೀಶ್ ಶೆಟ್ಟಿ ಸುಜಾತಾ ಅಶ್ವಿನ್ ಅಂದ್ರಾದೆ ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಸತೀಶ್ ಶೆಟ್ಟಿ ಅಲ್ವಿನ್ ಅಂದ್ರಾದೆ ಉಪಸ್ಥಿತರಿದ್ದರು.