ಉಡುಪಿ ನ್ಯೂಸ್ ಪ್ಲಸ್

ಪ್ರಸಾದ್ ನೇತ್ರಾಲಯವು ಗೋವಾದಲ್ಲೂ ವೈದ್ಯಕೀಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ – ಡಾ | ಪ್ರಮೋದ್ ಸಾವಂತ್

ಉಡುಪಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿಯ ಸಹಸಂಸ್ಥೆಯಾಗಿರುವ ಉಡುಪಿಯ ಕಿನ್ನಿಮುಲ್ಕಿ ವೆಗಾನ್ ಟೌನ್‌ಶಿಪ್‌ನಲ್ಲಿರುವ ನೇತ್ರಜ್ಯೋತಿ ಇನ್ನಿ ಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ನೇತ್ರಜ್ಯೋತಿ ಕಾಲೇಜ್ ಆಫ್ ಪಾರಾ ಮೆಡಿಕಲ್ ಸೈನ್ಸಸ್ ಇದರ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ಪದವಿ ಪ್ರದಾನ ಮಾತನಾಡಿದ. ಡಾ | ಪ್ರಮೋದ್ ಸಾವಂತ್ ಅವರು ಪ್ರಸಾದ್ ನೇತ್ರಾಲಯವು ಗೋವಾದಲ್ಲೂ ವೈದ್ಯಕೀಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿ ವಿನಿಮಯ ಯೋಜನೆ ಮೂಲಕ ಗೋವಾದಲೂ ಇಲಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಕಠಿನ ಪರಿಶ್ರಮದಿಂದ ಯಶಸ್ಸು ಗಳಿಸಬಹುದು. ನಿರಂತರ ಕಲಿಕೆಯೊಂದಿಗೆ ನಮ್ಮ ಜ್ಞಾನ ವೃದ್ಧಿಸಿಕೊಳ್ಳುವುದು ಅತಿ ಅಗತ್ಯ ಎಂದು ಹೇಳಿದರು

ಶಾಸಕ ಯಶ್‌ಪಾಲ್‌ ಎ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶುಭಾಶಂಸನೆಗೈದರು. ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ನ ಟ್ರಸ್ಟಿ ಕೆ. ರಘುರಾಮ್ ರಾವ್ ಉಪಸ್ಥಿತರಿದ್ದರು. ಸಂಸ್ಥೆ ವತಿಯಿಂದ ಪ್ರಮೋದ್ ಸಾವಂತ್ ಅವರನ್ನು ಸಮ್ಮಾನಿಸಲಾಯಿತು. ಕಾಲೇಜಿನ ಸ್ಥಾಪಕಾಧ್ಯಕ್ಷ ಡಾ ಕೂಡ್ಲು ಕೃಷ್ಣಪ್ರಸಾದ್ ಸ್ವಾಗತಿಸಿದರು.

ಕಾಲೇಜಿನ ಟ್ರಸ್ಟಿ ರಶ್ಮಿ ಕೃಷ್ಣಪ್ರಸಾದ್ ಪ್ರಸ್ತಾವಿಸಿದರು. ಎಂಐಟಿ ಪ್ರಾಧ್ಯಾಪಕ ಬಾಲಕೃಷ್ಣ ಮದ್ದೋಡಿ, ರಕ್ಷಾ, ಆಯಿಷಾ ನಿರೂಪಿಸಿದರು. ಸಿಒಒ ಡಾ| ಗೌರಿ ಪ್ರಭು, ಶ್ರೀನಿಧಿ, ಸೌಮ್ಯಶ್ರೀ ಅವರು ಪದವೀಧರರ ಪಟ್ಟಿ ವಾಚಿಸಿದರು. ಆಶೆಲ್ ರಕ್ಷಾ ವಂದಿಸಿದರು. ಘಟಿಕೋತ್ಸವದಲ್ಲಿ ಪ್ರಮೋದ್ ಸಾವಂತ್‌ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

Exit mobile version