Site icon ಉಡುಪಿ ನ್ಯೂಸ್ ಪ್ಲಸ್

ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕ ರಕ್ಷಕ ಸಭೆ 2025-26

ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆಯು ದಿನಾಂಕ 11ಮಂಗಳವಾರದಂದು ಅಲ್ ಸುಹೇಮಿ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಮತ್ತು ಪೋಷಕರ ಸಮ್ಮುಖದಲ್ಲಿ ಜರುಗಿತು.ಈ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜನಾಬ್ ರಫೀಕ್ ಮಾಸ್ಟರ್ ಅವರು ಉಪಸ್ಥಿತರಿದ್ದು ಹತ್ತನೇ ತರಗತಿಯ ಮಕ್ಕಳಿಗೆ ನಡೆಯಲಿರುವ ಪಬ್ಲಿಕ್ ಪರೀಕ್ಷೆಗೆ ಪೂರ್ವ ತಯಾರಿ ನಡೆಸುವಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಜೊತೆ ಪೋಷಕರ ಸಹಕಾರ ಎಷ್ಟು ಅಗತ್ಯ ಎಂಬುದನ್ನು ಮನದಟ್ಟು ಮಾಡಿಕೊಟ್ಟರು.ಮುಖ್ಯ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜನಾಬ್ ಮುಹಮ್ಮದ್ ಖಾಲಿದ್, ಶಾಲಾ ಧರ್ಮ ಗುರುಗಳಾದ ಮೌಲಾನ ಪರ್ವೇಜ್ ಆಲಂ ನದ್ವಿಯವರು ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಖೈರುನ್ನಿಸ ಉಪಸ್ಥಿತರಿದ್ದರು.ಶ್ರೀಮತಿ ದಾನಿಯಾ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಗೈದರು.

Exit mobile version