Site icon ಉಡುಪಿ ನ್ಯೂಸ್ ಪ್ಲಸ್

ಬ್ರೈನ್ ರೈನ್ ಎಕ್ಸ್ ಪೋ – 25

ಶಿರ್ವ ಫೈಝುಲ್ ಇಸ್ಲಾಂ ಆಂಗ್ಲ ಶಾಲಾ ಆವರಣದಲ್ಲಿ ಜನವರಿ 25 ಶನಿವಾರದಂದು ಏಕದಿನ ವಸ್ತು ಪ್ರದರ್ಶನ ಬ್ರೈನ್ ರೈನ್ ಎಕ್ಸ್ ಪೋ -25ನ್ನು ಬಹಳ ವಿಜೃಂಭಣೆಯಿಂದ ಏರ್ಪಡಿಸಲಾಯಿತು.ಜನಾಬ್ ಇಫ್ತಿಕಾರ್ ಅಹ್ಮದ್ ದುಬೈ ಏಕದಿನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಕ್ಕಳಿಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಜ್ಞಾನ, ಗಣಿತ, ಧಾರ್ಮಿಕ ವಿದ್ಯಾಭ್ಯಾಸದ ಮಾದರಿಗಳನ್ನು ತಯಾರಿಸುವಲ್ಲಿ ಪ್ರೋತ್ಸಾಹಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜನಾಬ್ ಮಹಮ್ಮದ್ ಖಾಲಿದ್ ರವರು ಬ್ರೈನ್ ರೈನ್ ಎಕ್ಸ್ ಪೋ 25 ರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಗೌರವಾನ್ವಿತ ಅತಿಥಿಗಳಾಗಿ ಸಿಟಿ ಡೆವೆಲಪರ್ ಉಡುಪಿ ಮಾಲಕರಾದ ಜನಾಬ್ ಆತೀಪ್ ಹುಸೇನ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಜನಾಬ್ ಮುಹಮ್ಮದ್ ಮೌಲಾ, ಶಿರ್ವ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ಹೆರಾಲ್ಡ್ ವಿಲ್ಸನ್ ರೊಡ್ರಿಗಸ್ , ಎಸ್.ವಿ.ಎಸ್ . ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ದಯಾನಂದ್ ಪೈ ಹಾಗೂ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಜನಾಬ್ ಹಸನಬ್ಬ ಶೇಖ್, ಪ್ರಧಾನ ಕಾರ್ಯದರ್ಶಿ ಜನಾಬ್ ಮುಹಮ್ಮದ್,ಜಂಟಿ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಸಾದಿಕ್, ಕೋಶಾಧಿಕಾರಿ ಜನಾಬ್ ಪರ್ವೇಝ್ ಸಲೀಂ, ಶಾಲಾ ಆಡಳಿತ ಮಂಡಳಿಯ ವರದಿಗಾರ ಜನಾಬ್ ಮಹಮ್ಮದ್ ಯೂನುಸ್,ಆಡಳಿತ ಮಂಡಳಿಯ ಸದಸ್ಯರಾದ ಜನಾಬ್ ಲತೀಫ್, ಜನಾಬ್ ನೂರ್ ಮುಹಮ್ಮದ್ , ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಖೈರುನ್ನಿಸ ಮತ್ತು ಶಾಲಾ ಆಡಳಿತಾಧಿಕಾರಿ ಶ್ರೀಮತಿ ರೇಶ್ಮಾ ತಾಜ್ ಉಪಸ್ಥಿತರಿದ್ದರು.ಅಮ್ರತುಲ್ ವಫಾ ಕಾರ್ಯಕ್ರಮ ನಿರೂಪಿಸಿದರು.ದಾನಿಯಾ ಸ್ವಾಗತಿಸಿದರು ಹಾಗೂ ನೌಶಿ ಫಾತಿಮಾ ಧನ್ಯವಾದ ಗೈದರು.

Exit mobile version