ಉಡುಪಿ ನ್ಯೂಸ್ ಪ್ಲಸ್

ಮೊದಲ ಪ್ರಯತ್ನದಲ್ಲೇ IAS ಪಾಸ್ ಆದ ತಪ್ಪೇನಾ ಬಾನು

ಮೊದಲ ಪ್ರಯತ್ನದಲ್ಲೇ IAS ಪಾಸ್ ಆದ ತಪ್ಪೇನಾ ಬಾನು ಈ ಬಾರಿ ಐಎಎಸ್ ಪಾಸ ಆದ ರಾಜ್ಯದ ಏಕೈಕ ಮುಸ್ಲಿಂ ವಿದ್ಯಾರ್ಥಿನಿ ಹುಬ್ಬಳ್ಳಿ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2021ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಹುಬ್ಬಳ್ಳಿ ಘಂಟಿಕೇರಿ ದೊಡ್ಡಮನಿ ಕಾಲೋನಿ ನಿವಾಸಿ ತಪ್ಪಿನಬಾನು ದಾವಡಿ 482ನೇ ರಾಂಕ್ ಪಡೆದು ಸಾಧನೆಯನ್ನು ಮಾಡಿದ್ದಾರೆ.

ದೊಡ್ಡಮನಿ ಕಾಲೋನಿಯ ಖಾದರ ಬಾಷಾ ಹಾಗೂ ಹಸೀನ ಬೇಗಂ ದಂಪತಿಯ ಪುತ್ರಿ ತಪ್ಪಿನ ಬಾನು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಏಕೈಕ ಮುಸ್ಲಿಂ ವಿದ್ಯಾರ್ಥಿನಿಯಾಗಿದ್ದಾರೆ. ತಪ್ಪೇನಾ ಪ್ರಾಥಮಿಕ ಶಿಕ್ಷಣವನ್ನು ರೈಲ್ವೆಯ ವುಮೆನ್ಸ್ ಆರ್ಗನೈಸೇಷನ್ ಸ್ಕೂಲ್ ನಲ್ಲಿ, ಪ್ರೌಢ ಶಿಕ್ಷಣವನ್ನು ಕಶ್ಯಾಪುರದ ಫಾತಿಮಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪಿಯುಸಿ ಶಿಕ್ಷಣವನ್ನು ವಿದ್ಯಾನಗರದ ವಿದ್ಯಾನಿಕೇತನ ವಿಜ್ಞಾನ ಪಿಯು ಕಾಲೇಜ್ ನಲ್ಲಿ, ನಂತರ ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರ. ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ ಇವರು ಮೊದಲು ಮುಂಬಯಿಯ ಹಜ್ ಹೌಸ್ ನಲ್ಲಿ ಪ್ರಿಲಿಮ್ಸ್ ತರಬೇತಿ ಪಡೆದುಕೊಂಡರು. ನಂತರ ಮೇನ್ಸ್ ಗೆ ತಯಾರಿ ಮತ್ತು ಸಂದರ್ಶನ ತರಬೇತಿಯನ್ನು ದೆಹಲಿಯ ಜಾಮೀಯಾ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡರು.

Exit mobile version