Site icon ಉಡುಪಿ ನ್ಯೂಸ್ ಪ್ಲಸ್

 ಕಂಬಳವು ಬಹಳ ಶ್ರಮ, ಶ್ರದ್ಧೆಯಿಂದ ನಡೆಯುತ್ತದೆ. ಬೆಂಗಳೂರಿಗರಿಗೆ ಕಂಬಳ ಗೊತ್ತಿಲ್ಲ, ಸಂಬಳ ಗೊತ್ತು : ನಂದಿಕೂರು ಕಂಬಳೋತ್ಸವದಲ್ಲಿ ಛಲವಾದಿ ನಾರಾಯಣ ಸ್ವಾಮಿ

ನಂದಿಕೂರು . ಬೆಂಗಳೂರು ಭಾಗದಲ್ಲಿ ಜಾತ್ರೆಗಳು ನಡೆಯುತ್ತದೆ.ಕಂಬಳವು ಬಹಳ ಶ್ರಮ, ಶ್ರದ್ಧೆಯಿಂದ ನಡೆಯುತ್ತದೆ ಕಂಬಳವೆಂದರೆ ಬೆಂಗಳೂರಿಗರಿಗೆ ಗೊತ್ತಿಲ್ಲ ಅಲ್ಲಿ ಸಂಬಳ ಗೊತ್ತು. ಇಲ್ಲಿ . ಮುಂದೆಯು ನಡೆಯಲಿ ಎಂದು ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.  ಅವರು ಅಡ್ವೆ- ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ  ನಂದಿಕೂರಿನಲ್ಲಿ ನಡೆದ 32 ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳೋತ್ಸವಕ್ಕೆ ಸಪತ್ನೀಕರಾಗಿ ಆಗಮಿಸಿ ಮಾತನಾಡಿದರು.  ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಿದ್ದರು. ಕಂಬಳ ಸಮಿತಿ ವತಿಯಿಂದ ಛಲವಾದಿ ನಾರಾಯಣ ಸ್ವಾಮಿ ದಂಪತಿಯನ್ನು ಸನ್ಮಾನಿಸಲಾಯಿತು.  ವೇದಿಕೆಯಲ್ಲಿ ಬಂಜಾರ ಗ್ರೂಪ್ ಸಿ.ಎಂ.ಡಿ. ಪ್ರಕಾಶ್ ಶೆಟ್ಟಿ, ಉದ್ಯಮಿ ರವಿ ಸುಂದರ್ ಶೆಟ್ಟಿ, ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಅಧ್ಯಕ್ಷರಾದ ಅಡ್ವೆ ಮೂಡ್ರ ಗುತ್ತು ಸುರೇಶ್ ಶೆಟ್ಟಿ,  ಪ್ರಧಾನ ಕಾರ್ಯದರ್ಶಿ ನವೀನಚಂದ್ರ ಸುವರ್ಣ ಅಡ್ವೆ, ನವೀನ್‌ ಚಂದ್ರ ಜೆ ಶೆಟ್ಟಿ, ಮಿಥುನ್‌ ಹೆಗ್ಡೆ, ದಿನಕರ ಬಾಬು    ಮತ್ತಿತರರು ಉಪಸ್ಥಿತರಿದ್ದರು.

Exit mobile version