ಉಡುಪಿ ನ್ಯೂಸ್ ಪ್ಲಸ್

ಕಟಪಾಡಿ ಎಸ್. ವಿ. ಎಸ್. ಪ.ಪೂ. ಕಾಲೇಜಿನ ಅಮೃತ ಮಹೋತ್ಸವ ಉದ್ಘಾಟಿಸಿದ – ಶಾಸಕ ಯಶ್‌ಪಾಲ್ ಸುವರ್ಣ

ಶಿಕ್ಷಣಕ್ಕೆ ಮಹತ್ವ ಕೊಟ್ಟು ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ನಮ್ಮ ಹಿರಿಯರು ಸ್ವಾತಂತ್ರ್ಯ ಪೂರ್ವದಲ್ಲೇ ಶಿಕ್ಷಣಕ್ಕೆ ಆದ್ಯತೆ ನೀಡಿ ಅತ್ಯಂತ ಕಷ್ಟದಿಂದ ಶಾಲೆಗಳನ್ನು ಕಟ್ಟಿ ಬೆಳೆಸಿದ್ದರು. ಶಿಕ್ಷಣಕ್ಕೆ ವಿಶ್ವದಲ್ಲಿಯೇ ಹೆಸರು ಪಡೆದ ಉಡುಪಿಯಲ್ಲಿ ಹಲವಾರು ವಿದ್ಯಾಸಂಸ್ಥೆಗಳು ಸಾವಿರಾರು ವಿದ್ಯಾರ್ಥಿಗಳನ್ನು ಸುಸಂಸ್ಕೃತರನ್ನಾಗಿ ಮಾಡುವಲ್ಲಿ ಕೊಡುಗೆ ನೀಡಿವೆ ಎಂದು ಶಾಸಕ ಯಶ್‌ಪಾಲ್ ಎ. ಸುವರ್ಣ ಹೇಳಿದರು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಕೀಳರಿಮೆ ಬೇಡ, ಶಾಲೆಯನ್ನು ಉಳಿಸಲು ಊರಿನ ವಿದ್ಯಾಭಿಮಾನಿಗಳು ಕೊಡುಗೆ ನೀಡುತ್ತಿರುವುದು ಅಭಿನಂದ ನೀಯ ಎಂದರು.ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ| ಎ. ರವೀಂದ್ರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ನಿಕಟ ಪೂರ್ವ ಸಂಚಾಲಕರಾದ ಕೆ. ವಸಂತ ಮಾಧವ ಭಟ್, ಕೆ. ರತ್ನಾಕರ ಕಿಣಿ, ನಿವೃತ್ತ ಪ್ರಾಂಶುಪಾಲೆ ಲಕ್ಷ್ಮೀ ಬ್ಯಾ, ಪಿ. ಉಪೇಂದ್ರ ನಾಯಕ್ ಮೆಮೋರಿಯಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಪಿ. ಸುರೇಶ್ ನಾಯಕ್, ಇಂಡಿಯನ್ ಆಯಿಲ್‌ ಕಾರ್ಪೊರೇಶನ್ ವಿಜಿಲೆನ್ ನಿವೃತ್ತ ಮಹಾಪ್ರಬಂಧಕ ಉಲ್ಲಾಸ್ ಕಾಮತ್, ಬೆಂಗಳೂರಿನ ಉದ್ಯಮಿ ಪ್ರೇಮನಾಥ್ ಶೆಟ್ಟಿ ಎಸ್‌ಎಸ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ. ದಿನೇಶ್ ಕಿಣಿ, ಪ್ರೇಮ್ ಕನ್‌ಸ್ಪೆಕ್ಷನ್ ನ ಅನಿಲ್ ಕುಮಾರ್ ಶೆಟ್ಟಿ ಬಿಇಒ ಡಾ| ಯಲ್ಲಮ್ಮ, ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಗ್ರಾ.ಪಂ. ಸದಸ್ಯ ಸುಭಾಷ್ ಬಲ್ಲಾಳ್, ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್. ಶಂಕರ
ಪೂಜಾರಿ, ನಿವೃತ್ತ ಮುಖ್ಯಶಿಕ್ಷಕರಾದ ಪ್ರಭಾಕರ್ ಸಿ., ಶೇಖರ್ ಅಂಚನ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್, ಪದಾಧಿಕಾರಿಗಳಾದ ಕೆ. ನಿತ್ಯಾನಂದ ಶೆಣೈ, ಕೆ. ವೆಂಕಟರಮಣ ಭಟ್‌ ಉಪಸ್ಥಿತರಿದ್ದರು. ಕಾಲೇಜಿನ ಸಂಚಾಲಕ ಕೆ. ಸತ್ಯೇಂದ್ರ ಪೈ ಸ್ವಾಗತಿಸಿ,
ಪ್ರಾಂಶುಪಾಲ ಡಾ| ದಯಾನಂದ ಪೈ ಪ್ರಸ್ತಾವನೆಗೈದರು. ದೈ.ಶಿ.ಶಿಕ್ಷಕ ಕಿರಣ್ – ಕುಮಾರ್ ಶೆಟ್ಟಿ ನಿರೂಪಿಸಿ, ಕಾವ್ಯದರ್ಶಿ . ಪಿ. ಸುಬ್ರಹ್ಮಣ್ಯ ತಂತ್ರಿ ವಂದಿಸಿದರು.

Exit mobile version